ಕ್ರೈಂ ಸ್ಟೋರಿಮನರಂಜನೆ

ಬಿಗ್​ ಬಾಸ್​ ಸ್ಫರ್ಧಿ ರಜತ್​ ಮತ್ತೆ ಅರೆಸ್ಟ್​..!

 

ಬೆಂಗಳೂರು : ಮಚ್ಚು ಹಿಡಿದು ರೀಲ್ಸ್​ ಮಾಡಿ ಜೈಲು ಸೇರಿದ್ದ ಬಿಗ್​ ಬಾಸ್​ ಸ್ಪರ್ಧಿ ರಜತ್​ ಕಿಶನ್​ಗೆ ಮತ್ತೆ ಬಂಧಿಸಿದ ಬಸವೇಶ್ವರ ನಗರ ಪೊಲೀಸರು. ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ರಜತ್​ನನ್ನು ವಶಕ್ಕೆ ಪಡೆದ ಪೊಲೀಸರು.

ಕಳೆದ ಒಂದು ತಿಂಗಳ ಹಿಂದೆ ಬಿಗ್‌ಬಾಸ್ ಸ್ಫರ್ಧಿ ರಜತ್​ ಮತ್ತು ವಿನಯ್​ ಮಚ್ಚು ಹಿಡಿದು ರೀಲ್ಸ್​ ಮಾಡಿದ್ದ ಆರೋಪದ ಮೇಲೆ ಬಸವೇಶ್ವರ​ ನಗರ ಪೊಲೀಸರು ಬಂಧಿಸಿದ್ದರು. ಮೂರು ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ರಜತ್​ ಮತ್ತು ವಿನಯ್​ ಷರತ್ತುಬದ್ದ ಜಾಮೀನು ಪಡೆದು ಜೈಲಿನಿಂದ ಆಚೆ ಬಂದಿದ್ದರು. ಇದೀಗ ಮತ್ತೊಮ್ಮೆ ರಜತ್​ನನ್ನು ಪೊಲೀಸರು ಬಂಧಿಸಿದ್ದಾರೆ .

ರಜತ್​ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಗೈರಾಗಿದ್ದರು ಎನ್ನಲಾಗಿದೆ. ಇದಕ್ಕೆ ನ್ಯಾಯಾಲಯ ಆರೋಪಿ ರಜತ್​ನನ್ನು ಬಂಧಿಸುವಂತೆ ವಾರೆಂಟ್​ ಹೊರಡಿಸಿತ್ತು. ಈ ಹಿನ್ನಲೆ ಪೊಲೀಸ್​ ಠಾಣೆಗೆ ವಿಚಾರಣೆಗೆ ಬಂದಿದ್ದ ರಜತ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Comments (0)

Your email address will not be published. Required fields are marked *

Back to top button