Top Newsರಾಜಕೀಯ

ಗಣಿ ಅಕ್ರಮ ಕೇಸಲ್ಲಿ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು

ಓಬುಳಾಪುರಂ ಮೈನಿಂಗ್ ಪ್ರಕರಣದಲ್ಲಿ ಹೈದ್ರಾಬಾದ್​ ನಲ್ಲಿರುವ ನಾಂಪಲ್ಲಿ ಕೋರ್ಟ್ ಅಂತಿಮವಾಗಿ ಮಹತ್ವದ ತೀರ್ಪು ನೀಡಿದೆ. ಸುದೀರ್ಘ 15 ವರ್ಷ ವಿಚಾರಣೆ ನಡೆಸಿದ್ದ ಸಿಬಿಐ ಕೋರ್ಟ್ ಇಂದು ತೀರ್ಪು ನೀಡಿದೆ.

ಈ ಪ್ರಕರಣದಲ್ಲಿ ಬಿಜೆಪಿಯ ಪ್ರಭಾವಿ ಮುಖಂಡ, ಗಂಗಾವತಿಯ ಶಾಸಕ ಜನಾರ್ದನ ರೆಡ್ಡಿ ಸೇರಿ ಐವರನ್ನು ದೋಷಿಗಳು ಎಂದು ತೀರ್ಪು ನೀಡಿದೆ. ಐವರಿಗೂ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಬಿವಿ ಶ್ರೀನಿವಾಸ ರೆಡ್ಡಿ, ಮೆಫಜ್ ಆಲಿ ಖಾನ್, ಗಣಿ ಇಲಾಖೆಯ ಮಾಜಿ ನಿರ್ದೇಶಕ ವಿಡಿ ರಾಜಗೋಪಾಲ್ ಈಗ ಜೈಲು ಸೇರುವ ಭೀತಿ ಎದುರಿಸುತ್ತಿದ್ದಾರೆ.

ಹಗರಣ ನಡೆದ ಸಂದರ್ಭದಲ್ಲಿ ಗಣಿ ಸಚಿವರಾಗಿದ್ದ ಸಬಿತಾ ಇಂದ್ರಾರೆಡ್ಡಿ, ಮಾಜಿ ಅಧಿಕಾರಿ ಕೃಪಾನಂದಂರನ್ನು ನಿರ್ದೋಷಿಗಳೆಂದು ಪ್ರಕಟಿಸಿದೆ.

ದೋಷಿ ನಂ. 1.- ಬಿವಿ ಶ್ರೀನಿವಾಸ ರೆಡ್ಡಿ (ಎ1)
ದೋಷಿ ನಂ. 2. ಗಾಲಿ ಜನಾರ್ದನ ರೆಡ್ಡಿ (ಎ2)
ದೋಷಿ ನಂ. 3. ವಿಡಿ ರಾಜಗೋಪಾಲ್ (ಎ3)
ದೋಷಿ ನಂ. 4. ಓಎಂಸಿ ಕಂಪನಿ ಪ್ರೈವೇಟ್ ಲಿಮಿಟೆಡ್ (ಎ4)
ದೋಷಿ ನಂ. 5.- ಮೇಫಜ್ ಆಲಿ ಖಾನ್, ರೆಡ್ಡಿ ಸಹಾಯಕ (ಎ7)

Comments (0)

Your email address will not be published. Required fields are marked *

Back to top button