ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮದುವೆಯಾದಾಗಿನಿಂದ ರನ್ಯಾ ಜೊತೆಗೆ ಒಂದಲ್ಲ ಒಂದು ನೋವು ಅನುಭವಿಸಿತ್ತಾ ಅಂತರ ಕಾಯ್ದುಕೊಂಡಿದ್ದ ಪತಿ ಜತೀನ್ ಹುಕ್ಕೇರಿ ಅವರು ಗುಡ್‌ಬೈ ಡಿಸೈಡ್ ಮಾಡಿದ್ದಾರೆ.
ಜೈಲಲ್ಲಿರುವ ಆರೋಪಿ, ನಟಿ ರನ್ಯಾ ರಾವ್ ಅವರಿಗೆ ಇಂದು ಪತಿ ಜತೀನ್ ಹುಕ್ಕೇರಿ ಅವರು ಡಿವೋರ್ಸ್ ನೀಡುತ್ತಿದ್ದಾರೆ. ಇಂದು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದೇನೆ ಎಂದು ರನ್ಯಾ ರಾವ್ ಪತಿ ಜತೀನ್ ಹುಕ್ಕೇರಿ ಹೇಳಿದ್ದಾರೆ.
ರನ್ಯಾ ರಾವ್ ಪತಿ ಜಿತೀನ್ ಹುಕ್ಕೇರಿ ಅವರು ಇಂದು ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ವಿಚ್ಛೇದನ ಕೋರಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಮದುವೆಯಾದಾಗಿನಿಂದ ಜಿತೀನ್ ಹಾಗೂ ರನ್ಯಾ ರಾವ್ ಜೊತೆಗೆ ಒಂದಲ್ಲ ಒಂದು ಭಿನ್ನಾಭಿಪ್ರಾಯಗಳಿತ್ತು. ಕೆಲವು ತಿಂಗಳಿಂದ ಅಂತರ ಕಾಯ್ದುಕೊಂಡಿದ್ದ ಪತಿ ಜಿತೀನ್ ಅವರು ದಾಂಪತ್ಯ ಜೀವನಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ.


