Wednesday, January 28, 2026
18.8 C
Bengaluru
Google search engine
LIVE
ಮನೆರಾಜಕೀಯಎಸ್​​ಟಿ ಬೋರ್ಡ್​​​ನಲ್ಲಿ ದೊಡ್ಡ ಹಗರಣ, ಸಚಿವ ನಾಗೇಂದ್ರ ವಜಾಕ್ಕೆ ವಿಜಯೇಂದ್ರ ಆಗ್ರಹ: ಪ್ರತಿಭಟನೆಯ ಎಚ್ಚರಿಕೆ

ಎಸ್​​ಟಿ ಬೋರ್ಡ್​​​ನಲ್ಲಿ ದೊಡ್ಡ ಹಗರಣ, ಸಚಿವ ನಾಗೇಂದ್ರ ವಜಾಕ್ಕೆ ವಿಜಯೇಂದ್ರ ಆಗ್ರಹ: ಪ್ರತಿಭಟನೆಯ ಎಚ್ಚರಿಕೆ

ಕಲಬುರಗಿ: ಎಸ್​​ಟಿ ಬೋರ್ಡ್​​ನಲ್ಲಿ ದೊಡ್ಡ ಹಗರಣವೊಂದು ನಡೆದಿರುವುದು ನಿನ್ನೆ ಬೆಳಕಿಗೆ ಬಂದಿದೆ. ಆ ಇಲಾಖೆ ನೌಕರ 187 ಕೋಟಿ ಹಗರಣದ ಬಗ್ಗೆ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣವೇ ಇಲಾಖೆಯ ಸಚಿವ ನಾಗೇಂದ್ರರನ್ನು (Nagendra) ವಜಾ ಮಾಡಬೇಕು. ಇಲ್ಲವಾದಲ್ಲಿ BJP ರಾಜ್ಯದಾದ್ಯಂತ ಹೋರಾಟ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ಸರ್ಕಾರವನ್ನು ಆಗ್ರಹಿಸಿದರು. ಕಲಬುರಗಿಯಲ್ಲಿ ಮಾತನಾಡಿದ ಅವರು, ನಿಜವಾಗಿಯೂ ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್. ಕೂಡಲೆ ಸಿಎಂ ಸಿದ್ದರಾಮಯ್ಯ ಆ ಇಲಾಖೆಯ ಸಚಿವರನ್ನು ಮಂತ್ರಿ ಮಂಡಲದಿಂದ ಕೈ ಬಿಡಬೇಕು ಎಂದರು.

ಹೈಕೋರ್ಟ್ ನ್ಯಾಯಧೀಶರ ನೈತೃತ್ವದಲ್ಲಿ ಪ್ರಕರಣದ ತನಿಖೆಯಾಗಬೇಕು. ಈ ವಿಚಾರವಾಗಿ ನಾವು ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಸೂಪರಿಂಡೆಂಟ್ ಚಂದ್ರಶೇಖರ್ ಶಿವಮೊಗ್ಗದ ವಿನೋಬ ನಗರದ ಕೆಂಚಪ್ಪ ಲೇಔಟ್​ನಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದಲ್ಲಿ 187 ಕೋಟಿ ಹಗರಣ ನಡೆದಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿತ್ತು. ಇದಕ್ಕೆ ಪೂರಕ ಅಂಶಗಳು ಅವರು ಬರೆದಿಟ್ಟಿದ್ದ ಡೆತ್​ನೋಟ್​ನಲ್ಲಿತ್ತು.

ಮಧು ಬಂಗಾರಪ್ಪ ಹೇರ್​ ಕಟಿಂಗ್ ಬಗ್ಗೆ ನೀಡಿದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, ಅವರಿಗೆ ಕೇಳಿದ್ದು ನನ್ನ ಪ್ರಶ್ನೆಯಲ್ಲ. ಅಲ್ಲಿನ ಕೆಲ ಶಿಕ್ಷಕರು ಕೇಳಿದ್ದನ್ನು ನಾನು ಹೇಳಿದ್ದೆ ಅಷ್ಟೆ. ಕನ್ನಡ ಬರಲ್ಲ ಎಂದು ಮಧು ಬಂಗಾರಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಶಿಕ್ಷಣ ಸಚಿವರಾಗಿ ಹೇಗೆ ಇರಬೇಕು ಎಂದು ಶಿಕ್ಷಕರು ಹೇಳಿದ್ದನ್ನೇ ಹೇಳಿದ್ದೆ. ಮಧು ಬಂಗಾರಪ್ಪ ಬಹಳ ಮನಸ್ಸಿಗೆ ಹಚ್ಚಿಕೊಂಡಿದ್ದಾರೆ ಅನ್ಸುತ್ತೆ ಎಂದರು.

ಹಣಕಾಸಿನ ಸಮಸ್ಯೆ ಇದ್ರೆ ಯುವ ಮೋರ್ಚಾದವರಿಗೆ ಹೇಳುತ್ತೇನೆ. ಪ್ರತಿ ತಿಂಗಳು ಹೇರ್ ಕಟ್​ಗೆ ಮಧು ಬಂಗಾರಪ್ಪಗೆ ಹಣ ಕೊಡಬೇಕು ಎಂದು ಹೇಳುತ್ತೇನೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

ಪ್ರಜ್ವಲ್ ವಿಡಿಯೋ ಹೇಳಿಕೆಗೆ ಏನಂದ್ರು ವಿಜಯೇಂದ್ರ?

ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೇಳಿಕೆ ಗಮನಿಸಿದ್ದೇನೆ. ತನಿಖೆಗೆ ಒಳಗಾಗುತ್ತೇನೆ ಎಂದು ಹೇಳಿದ್ದನ್ನು ಸ್ವಾಗತಿಸುತ್ತೇನೆ. ಜನಪ್ರತಿನಿಧಿ ಆಗಿರುವವರು ಧೈರ್ಯವಾಗಿ ಎದುರಿಸಬೇಕು. ಕಳೆದ 1 ತಿಂಗಳಿಂದ ನಾನಾ ರೀತಿಯ ವಿಷಯಗಳು ಹರಿದಾಡಿವೆ. ತನಿಖಾ ಸಂಸ್ಥೆ ಮುಂದೆ ಹಾಜರಾಗಬೇಕು, ತನಿಖೆ ಎದುರಿಸಬೇಕು ಎಂದರು.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments