Wednesday, August 20, 2025
18.9 C
Bengaluru
Google search engine
LIVE
ಮನೆ#Exclusive Newsಬಿಡಿಎ PRO ಅನಧಿಕೃತ ಕಾರ್ಯ - ನಿಂಬಾಳ್ಕರ್​, ಮಣಿವಣ್ಣನ್​ ಅವರತ್ತ ಬೊಟ್ಟು

ಬಿಡಿಎ PRO ಅನಧಿಕೃತ ಕಾರ್ಯ – ನಿಂಬಾಳ್ಕರ್​, ಮಣಿವಣ್ಣನ್​ ಅವರತ್ತ ಬೊಟ್ಟು

ಬೆಂಗಳೂರು: ಯಾವುದೇ ಸರ್ಕಾರಿ ಆದೇಶವಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಬಿಡಿಎ PRO ಕೆ.ಎನ್.ವಿಜಯಾನಂದ ಅವರು ಇದೀಗ ಬಿಡಿಎ ಕಮೀಷನರ್ ಹಾಗೂ ವಾರ್ತಾ ಇಲಾಖೆ ಕಮೀಷನರ್ ಅವರತ್ತ ಬೊಟ್ಟು ಮಾಡಿದ್ದಾರೆ.

ವಾರ್ತಾ ಇಲಾಖೆ ಹೆಡ್ಡಾಫೀಸ್​ ನಲ್ಲಿ ಸಹಾಯಕ ನಿರ್ದೇಶಕರಾಗಿದ್ದ ವಿಜಯಾನಂದರನ್ನು 2 ವರ್ಷದ ಹಿಂದೆ ಬಿಡಿಎನಲ್ಲಿದ್ದ ಖಾಲಿ PRO ಹುದ್ದೆಗೆ ಹೆಚ್ಚುವರಿಯಾಗಿ ಹಾಕಲಾಗಿತ್ತು. ಈಗಲೂ ಅದೇ ಹುದ್ದೆಯಲ್ಲಿ ಹೆಚ್ಚುವರಿಯಾಗಿ ಮುಂದುವರೆದಿದ್ದಾರೆ. ಆದರೆ, ಇವರನ್ನು 2025ರ ಜುಲೈ 30ರಂದು ಸಹಾಯಕ ನಿರ್ದೇಶಕ ಹುದ್ದೆಯಿಂದ ಸ್ಥಳ ತೋರಿಸದೇ ವರ್ಗಾಯಿಸಿದೆ. ಆದರೆ ವಿಜಯಾನಂದ ಸರ್ಕಾರದ ಆದೇಶಕ್ಕೆ ತಲೆಬಾಗದೆ, ಬಿಡಿಎ ನಲ್ಲಿ ಇಂದಿಗೂ PRO ಹುದ್ದೆಯಲ್ಲಿ ಮುಂದುವರೆದಿದ್ದಾರೆ. ಇಂದಿಗೂ ಬಿಡಿಎ ವಾಹನದಲ್ಲಿ ಓಡಾಡುತ್ತಾ, ಕಡತಗಳಿಗೆ ಸಹಿ ಮಾಡುತ್ತಿದ್ದಾರೆ.

ಅಧಿಕೃತವಾಗಿ ಹುದ್ದೆಯೇ ಇಲ್ಲದ ಮೇಲೆ, ಯಾವ ರೀತಿ ಬಿಡಿಎ ನಲ್ಲಿ PRO ಹುದ್ದೆಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಸರ್ಕಾರದ ಆದೇಶಕ್ಕೆ ಬೆಲೆ ಇಲ್ಲವೋ ಅಥವಾ ವಿಜಯಾನಂದ ಅವರೇ ಸರ್ಕಾರಕ್ಕೆ ಸೆಡ್ಡು ಹೊಡೆದ್ದಿದ್ದಾರೋ ಅನ್ನೋದು ಬಿಡಿಎ, ವಾರ್ತಾ ಇಲಾಖೆ ನೌಕರರು ಪ್ರಶ್ನೆ.

ಈ ಬಗ್ಗೆ ಫ್ರೀಡಂಟಿವಿಯು ಶ್ರೀ ವಿಜಯಾನಂದರ ಪ್ರತಿಕ್ರಿಯೆ ಕೇಳಿದಾಗ ಅವರು ಹೀಗಂದ್ರು. “ನಾವೆಲ್ಲೂ ಕಾನೂನು ಮೀರಿ ಎಲ್ಲೂ ಕೆಲಸ ಮಾಡಲ್ಲ.. ನಾನು ರಿಲೀವ್ ಮಾಡ್ಲಿ ಅಂತಾನೆ ಕಾಯ್ತಾ ಇದ್ದೀನಿ. ರಿಲೀವ್ ಮಾಡಿದ ತಕ್ಷಣ ಹೊರಡ್ತೀನಿ. ಈ ರೀತಿ ಸುದ್ದಿ ಮಾಡುವಾಗ ಸ್ವಲ್ಪ ಕಾನೂನು ತಿಳ್ಕೊಳಿ. ರಿಲೀವ್ ಮಾಡ್ದೇನೆ ನಾನು ಆ ಜಾಗದಿಂದ ಹೋಗಲು ಆಗುತ್ತಾ? ನಮ್ಮ ಆಯುಕ್ತರ ಕಚೇರಿಯಿಂದ ಮೂಮೆಂಟ್ ಆರ್ಡರ್ ನಾ ಕೊಡುವಾಗ ರಿಲೀವ್ ಮಾಡಿಲ್ಲ” ಎಂದು ಖಡಕ್ಕಾಗಿ ಹೇಳಿದ್ದಾರೆ.

ಇಲ್ಲಿ ಕಾನೂನು ತಿಳ್ಕೊಬೇಕಿರೋದು ವಿಜಯಾನಂದ ಅವರೋ? ಅಥವಾ ಬಿಡಿಎ ಕಮೀಷನರ್ ಅವರೋ? ವಾರ್ತಾ ಇಲಾಖೆ ಆಯುಕ್ತರೋ? ಎಂಬುದು ಪ್ರಶ್ನೆಯಾಗಿ ಉಳಿದಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments