ಕ್ರೈಂ ಸ್ಟೋರಿರಾಜ್ಯ

ಅತ್ತೆಯ ಕೊಲೆ ಮಾಡಿ ಪರಾರಿಯಾದ ಭೂಪ..!

ಚಿಕ್ಕಮಗಳೂರು: ಅಳಿಯನಿಂದಲೇ ಅತ್ತೆಯ ಕೊಲೆ ನಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲ್ ಗ್ರಾಮದಲ್ಲಿ ನಡೆದಿದೆ.

65 ವರ್ಷದ ಯಮುನಾ ಎಂಬುವವರನ್ನು ಅವರ ಅಳಿಯ ಶಶಿಧರ್‌ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ಬಳಿಕ ಆರೋಪಿ ಶಶಿಧರ್ ಪರಾರಿಯಾಗಿದ್ದಾನೆ.

ಪ್ರಕರಣ ಬಣಕಲ್ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು, ಪರಾರಿಯಾದ ಶಶಿಧರ್ ನ ಪತ್ತೆಗೆ ಪೋಲಿಸರು ಶೋಧ ನಡೆಸಿದ್ದಾರೆ.

Comments (0)

Your email address will not be published. Required fields are marked *

Back to top button