ಭೀಮ್ ಆರ್ಮಿ ಮುಖಂಡನ ಕಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.. ಸತೀಶ್ ಹುಗ್ಗಿ ಎಂಬುವವರ ಕಾರಿಗೆ ಕಿಡಿಗೆಡಿಗಳು ಬೆಂಕಿ ಹಚ್ಚಿದ್ದಾರೆ.
ಶಹಾಬಾದ್ ರಿಂಗ್ ರಸ್ತೆಯ ಬಳಿ ಘಟನೆ ನಡೆದಿದ್ದು, ಸತೀಶ್ ಅವರ ಮನೆ ಮುಂದೆ ನಿಲ್ಲಿಸಿದ್ದ ಕಾರ್ ಮೇಲೆ ದಾಳಿ ನಡೆದಿದೆ. ಈ ಘಟನೆಯು ದಲಿತ ಸಂಘಟನೆಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, RSS ಪಥಸಂಚಲನ ವಿರುದ್ಧದ ಹೋರಾಟದ ಹಿನ್ನೆಲೆಯಲ್ಲಿ ಇದು ನಡೆದಿದೆ ಎಂದು ಆರೋಪಿಸಲಾಗುತ್ತಿದೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್ ತನಿಖೆಗೆ ಮುಂದಾಗಿದ್ದಾರೆ. ಸತೀಶ್ ಹುಗ್ಗಿ ಆರ್ ಎಸ್ ಸರ್ ಪಥಸಂಚಲನ ವಿರುದ್ಧದ ಹೋರಾಟದಲ್ಲಿ ಮುಂದಾಳತ್ವ ವಹಿಸಿದ್ದು, ಈ ಹಿನ್ನಲೆ ಬೆದರಿಕೆಯಾಕಲು ತಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


