ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ವಿಚಾರ ಸಂಚಲನ ಸೃಷ್ಟಸಿತ್ತು. ವಿಧಾನಸಭೆ ಅಧಿವೇಶನದಲ್ಲಿ ಸಚಿವ ರಾಜಣ್ಣ ತಮ್ಮ ಮೇಲೆ ಹನಿಟ್ರ್ಯಾಪ್ಗೆ ಯತ್ನಿಸಲಾಗಿದೆ ಎಂದು ಆರೋಪಿಸಿದ್ದರು. ಬಳಿಕ ಇದಕ್ಕೆ ಸಂಬಂಧಿಸಿದಂತೆ ರಾಜಣ್ಣ ಗೃಹಸಚಿವ ಪರಮೇಶ್ವರ್ ಅವರಿಗೂ ಸಹ ದೂರು ನೀಡಿದ್ರು.
ಇದಾದ ಬಳಿಕ ರಾಜಣ್ಣ ಪುತ್ರ ಎಂಎಲ್ಸಿ ರಾಜೇಂದ್ರ ಹನಿಟ್ರ್ಯಾಪ್ಗೆ ಬಂದವರು ಹತ್ಯೆಗೆ ಸಂಚು ರೂಪಸಿದ್ದರೆಂದು ಆರೋಪಿಸಿದ್ದರು. ಈ ಬೆನ್ನಲ್ಲೆ ರಾಜೇಂದ್ರ ಡಿಜಿಗೆ ದೂರು ನೀಡಿದ್ದರು. ಇದೀಗ ಎಂಎಲ್ಸಿ ರಾಜೇಂದ್ರ ತುಮಕೂರು ಎಸ್ಪಿಗೆ ದೂರು ಕೊಟ್ಟಿದ್ದಾರೆ.
ದೂರು ಕೊಟ್ಟ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಗೆ ದೂರು ನೀಡಿದ್ದೆ. ತುಮಕೂರು ಎಸ್ಪಿಗೆ ದೂರು ಕೊಡುವಂತೆ ಸೂಚನೆ ಕೊಟ್ಟಿದ್ದರು. ನನ್ನ ಮಗಳ ಬರ್ತ್ ಡೇ ದಿನದಂದು ನನ್ನ ಕೊಲೆಗೆ ಯತ್ನಸಿದ್ದರು. ಕೊಲೆಗೆ 70 ಲಕ್ಷ ಸುಪಾರಿ ನೀಡಲಾಗಿತ್ತು. ಈ ಕುರಿತು ದಾಖಲೆಗಳಿಗೆ, ಹೀಗಾಗಿ ಭದ್ರತೆ ಕೊಡಿ ಎಂದು ಪೋಲಿಸ್ ಇಲಾಖೆಗೆ ಕೇಳಿದ್ದೇನೆ ಎಂದು ರಾಜೇಂದ್ರ ಹೇಳಿದ್ದಾರೆ.


