Wednesday, January 28, 2026
17 C
Bengaluru
Google search engine
LIVE
ಮನೆ#Exclusive NewsTop Newsದಿನೇಶ್ ಗುಂಡೂರಾವ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ತೇಜಸ್ ಗೌಡ

ದಿನೇಶ್ ಗುಂಡೂರಾವ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ತೇಜಸ್ ಗೌಡ

ಬೆಂಗಳೂರು: ಸಾವರ್ಕರ್ ಬ್ರಾಹ್ಮಣರಾಗಿದ್ದರೂ ಗೋಹತ್ಯೆ ವಿರೋಧಿಸುತ್ತಿರಲಿಲ್ಲ , ಗೋಮಾಂಸ ತಿನ್ನುತ್ತಿದ್ದರು ಎಂದು ಅವರ ಬಗ್ಗೆ ಅವಹೇಳನವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡದರು ಎಂದು ಹಿಂದು ಮುಖಂಡ ತೇಜಸ್ ಎ.ಗೌಡ ಪೊಲೀಸ್ ಆಯುಕ್ತರಿಗೆ ದೂರು ನೀಡಿದರು.

ಈ ಹಿಂದೆ ಡಾ. ಹೆಚ್​.ಎನ್ ಮಲ್ಟಿಮೀಡಿಯಾ ಹಾಲ್​ನಲ್ಲಿ ಗಾಂಧಿ ಜಯಂತಿ ಹಿನ್ನಲೆಯಲ್ಲಿ ಮುಖ್ಯ ಅತಿಥಿಗಳಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಿದ್ದರು. ಇದೇ ವೇಳೆ ಭಾಷಣ ಮಾಡಿದ ಅವರು ಅಪ್ಪಟ ರಾಷ್ಟ್ರೀಯವಾದಿ, ದೇಶಭಕ್ತನಾದ, ಹಿರಿಯ ಸ್ವಾತಂತ್ರ ಹೋರಾಟಗಾರ ವೀರ ಸಾವರ್ಕರ್ ಬಗ್ಗೆ ಅವಹೇಳವಾಗಿ ಮಾತುಗಳನ್ನಾಡಿದರು. ಅಲ್ಲದೇ ಅವರು ಭ್ರಾಹ್ಮಣನಾಗಿದ್ದರು ಗೋಮಾಂಸವನ್ನು ತಿನ್ನುತ್ತಿದ್ದರು ಎಂದು ಕೀಳಾಗಿ ಟೀಕಿಸಿದರು. ರಾಜ್ಯದ ಆರೋಗ್ಯ ಮಂತ್ರಿಯಾಗಿ ಜವಾಬ್ದಾರಿಯುತ ಸ್ಥಳದಲ್ಲಿರುವ ಅವರು ಬೇಜಬ್ದಾರಿತನದಿಂದ ಹೇಳಿಕೆಯನ್ನು ನೀಡಿದ್ದು, ನೋವುಂಟು ಮಾಡಿದೆ. ಇದು ಕೋಮು ದ್ವೇಶ, ಕೋಮು ಪ್ರಚೋದನೆಗೆ ದಾರಿ ಮಾಡಿಕೊಡುತ್ತದೆ.

ಹಾಗಾಗಿ ಎಲ್ಲಾ ವಿಷಯಗಳನ್ನು ಪರಿಶೀಲಿಸಿ ಹಿರಿಯ ಸ್ವಾತಂತ್ರ ಹೋರಾಟಗಾರ ವೀರ ಸಾವರ್ಕರ್ ಅವರ ಬಗ್ಗೆ ಅವಹೇಳನ ಮಾತುಗಳನ್ನಾಡಿದ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ದೂರು ದಾಖಲಿಸಿ, ಸೂಕ್ತವಾದ ಕಾನೂನು ಕ್ರಮವನ್ನು ತೆಗೆಕೊಳ್ಳಬೇಕೆಂದು ತಿಳಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments