ಬೆಂಗಳೂರು :
ಇಂದು ನಡೆಯುತ್ತಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನದ ವೇಳೆ ಮತದಾರರಿಗೆ ಹಣ ಹಂಚುತ್ತಿದ್ದ ಆರೋಪದಡಿ ದಿವ್ಯಾ ಧನಲಕ್ಷಿ ಎಂಬಾಕೆಯನ್ನ ಬಂಧಿಸಲಾಗಿದೆ.
ದಿವ್ಯಾ ಧನಲಕ್ಷ್ಮಿ ಅತ್ತಿಗುಪ್ಪೆ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕಿ ಆಗಿ ಕೆಲಸ ನಿರ್ವಹಿಸ್ತಿದ್ದಾರೆ. ಮತದಾನದ ವೇಳೆ, ಅಭ್ಯರ್ಥಿ ಪರ ಮತ ಹಾಕುವಂತೆ ಆಮೀಷವೊಡ್ಡಿ, ಹಣ ಹಂಚಿಕೆ ಮಾಡುತ್ತಿದ್ರು ಎಂಬ ಆರೋಪದಡಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.