ಟಾಲಿವುಡ್ಗೆ ಸಂಬಂಧಿಸಿ ಪ್ಯಾನ್ಸ್ ವಾರ್ ಜೋರಾಗಿರುತ್ತದೆ. ಆಂಧ್ರ,ತೆಲಂಗಾಣದಲ್ಲಿ ಇದು ಸಾಮಾನ್ಯ ವಿಷಯ.. ಆದರೆ, ಬೆಂಗಳೂರಿನಲ್ಲಿ ಟಾಲಿವುಡ್ ಹೀರೋಗಳಿಗೆ ಸಂಬಂಧಿಸಿ ಫ್ಯಾನ್ಸ್ ವಾರ್ ನಡೆದಿದೆ.
ಹೀರೋ ಅಲ್ಲು ಅರ್ಜುನ್ ಬಗ್ಗೆ ಕೆಟ್ಟದಾಗಿ ಮಾತಾಡಿದ್ರು.. ನಿಂದಿಸಿದ್ರು ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಅಲ್ಲು ಅರ್ಜುನ್ ಅಭಿಮಾನಿಗಳು, ಪ್ರಭಾಸ್ ಅಭಿಮಾನಿಯೊಬ್ಬನನ್ನು ಹಿಡಿದು ಥಳಿಸಿದ ಘಟನೆ ಬೆಂಗಳೂರು ಹೊರವಲಯದ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅವಾಚ್ಯ ಶಬ್ಧಗಳಿಂದ ನಿಂದಿಸಿ ಬಟ್ಟೆ ಹರಿಯುವ ರೀತಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲ ಜೈ ಅಲ್ಲು ಅರ್ಜುನ್ ಎನ್ನುವಂತೆ ಅಲ್ಲು ಅರ್ಜುನ್ ಅಭಿಮಾನಿಗಳು, ಪ್ರಭಾಸ್ ಅಭಿಮಾನಿಗೆ ಬಲವಂತ ಮಾಡಿದ್ದಾರೆ. ಭಯ್ಯಾ ಬಿಟ್ಟುಬಿಡು ಎಂದರೂ ಯಾರ ಮನಸ್ಸು ಕರಗಿಲ್ಲ.
ಭೈರವ ಜೆ3 ಎಂಬ ಟ್ವಿಟ್ಟರ್ ಬಳಕೆದಾರ ಇದನ್ನು ಬೆಂಗಳೂರು ಪೊಲೀಸರ ಗಮನಕ್ಕೆ ತಂದಿದ್ದು, ಕೂಡ್ಲೇ ಕ್ರಮ ವಹಿಸಲು ಒತ್ತಾಯಿಸಿದ್ದಾರೆ. ಇದಕ್ಕೆ ಪೊಲೀಸರು ಕೂಡ ಸ್ಪಂದಿಸಿದ್ದಾರೆ.
. @BlrCityPolice you should take action on this kind of people, just for online far wars this is not acceptable, kindly take proper action. pic.twitter.com/kfn4GlxmiO
— KCR (@Jack_JackParr) March 10, 2024
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗ್ತಿದೆ. ಇದೆಂಥಾ ಹುಚ್ಚು ಅಭಿಮಾನ, ಅತಿರೇಕದ ಅಭಿಮಾನ ಎಂದು ಪ್ರಶ್ನಿಸತೊಡಗಿದ್ದಾರೆ.


