ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್ ವಿಚಾರಣಾಧೀನ ಕೈದಿ ನಂಬರ್ ಅನ್ನು ಆಟೋ ಮೇಲೆ ಬರೆಸಿಕೊಂಡು ವ್ಹೀಲಿಂಗ್ ಮಾಡಿದ್ದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಜಗದೀಶ್ ಬಂಧಿತ ಆಟೋ ಚಾಲಕ. ಆರೋಪಿ ಜಗದೀಶ್ ಮೂಲತಃ ಹಾಸನದ ಹೊಳೆನರಸೀಪುರದವನಾಗಿದ್ದು, ಬೆಂಗಳೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ.
ದರ್ಶನ್ ವಿಚಾರಣಾಧೀನ ಕೈದಿ ನಂಬರ್ 6106 ಅನ್ನು ಆಟೋ ಹಿಂದೆ ಬರೆಸಿಕೊಂಡು ಕಾಣುವಂತೆ ನಡುರಸ್ತೆಯಲ್ಲಿ ವ್ಹೀಲಿಂಗ್ ಮಾಡಿದ್ದ. ವಾಟಾಳ್ ನಾಗರಾಜ್ ರಸ್ತೆ ಅಂಡರ್ ಪಾಸ್ ಬಳಿ ಜಗದೀಶ್ ವ್ಹೀಲಿಂಗ್ ಮಾಡಿ, ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ.

ವ್ಹೀಲಿಂಗ್ ವೀಡಿಯೋ ವೈರಲ್ ಆಗುತ್ತಿದ್ದಂತೆ ಉತ್ತರದ ವಿಭಾಗದ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಟೋ ಚಾಲಕ ಜಗದೀಶ್‌ನನ್ನು ಬಂಧಿಸಿದ್ದಾರೆ. ಬಂಧಿತ ಆಟೋ ಚಾಲಕನಿಂದ ವ್ಹೀಲಿಂಗ್ ಮಾಡಿದ್ದ ಆಟೋ ಸೀಜ್ ಮಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಟ ದರ್ಶನ್ ಕೈದಿ ನಂಬರ್ ವಿಚಾರವಾಗಿ ಅನೇಕ ಅಭಿಮಾನಿಗಳು ಹುಚ್ಚಾಟ ಮೆರೆದಿದ್ದರು. ಹಲವರು ತಮ್ಮ ಕೈಗೆ ನಂಬರ್‌ನ್ನು ಟ್ಯಾಟೂ ಹಾಕಿಸಿಕೊಂಡಿದ್ದರು. ಇನ್ನೂ ಕೆಲವರು ತಮ್ಮ ವಾಹನಗಳಿಗೆ ನಂಬರ್ ಹಾಕಿಕೊಂಡಿದ್ದರು. ಅಭಿಮಾನಿಯೊಬ್ಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಮಗುವಿಗೆ ನಂಬರ್ ಇರುವ ಕೈದಿಗಳ ವಸ್ತ್ರ ಧರಿಸಿ ಫೋಟೊಶೂಟ್ ಮಾಡಿಸಿದ್ದ. ಆತನಿಗೆ ಮಕ್ಕಳ ಕಲ್ಯಾಣ ಆಯೋಗ ನೋಟಿಸ್ ನೀಡಿತ್ತು.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com


