ಬೆಳಗಾವಿ : ರಾಜಕಾರಣಿಯೊಬ್ಬ ರಾಜಕಾರಣಿಯನ್ನ ಬೈಯ್ಯೋದು ಕಾಮನ್..ಆದ್ರೆ ಬೆಳಗಾವಿ ಜಿಲ್ಲೆಯ ಕಾಗವಾಡ ಶಾಸಕ ರಾಜು ಕಾಗೆ ಸ್ಪೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ. ತಮ್ಮನ್ನ ತಾವೇ ಬೈದುಕೊಂಡು ಆಶ್ಚರ್ಯ ಸೃಷ್ಟಿಸಿದ್ದಾರೆ.

ಹೌದು, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ರಾಜಕಾರಣಿಗಳು ಬೆಚ್ಚಿ ಬೀಳುವಂತಹ ಸ್ಟೇಟ್ ಮೆಂಟ್ ವೊಂದನ್ನ ನೀಡಿದ್ದಾರೆ. ಖಾಸಗಿ ಶಾಲೆಯ ಬೀಳ್ಕೊಡುಗೆ ಸಮಾರಂಭಕ್ಕೆ ಆಗಮಿಸಿದ್ದ ರಾಜು ಕಾಗೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.
ರಾಜಕೀಯ ವ್ಯವಸ್ಥೆಗಳು ತುಂಬಾ ಕೆಟ್ಟೋಗಿದೆ. ರಾಜಕಾರಣಿಗಳು ಯಾರೂ ಪವಿತ್ರವಾಗಿಲ್ಲ. ಜಗತ್ತಿನಲ್ಲಿ ಲೂಟಿ ಮಾಡೋರು, ದರೋಡೆ ಮಾಡೋರ ಪಟ್ಟಿಯಲ್ಲಿ ನಾವೇ ಮೊದಲು ಅಂತ ರಾಜಕಾರಣಿಗಳ ಪರವಾಗಿ ಸತ್ಯ ಒಪ್ಪಿಕೊಂಡಿದ್ದಾರೆ. ಈ ಹೇಳಿಕೆ ರಾಜ್ಯದ ರಾಜಕಾರಣಿಗಳಲ್ಲಿ ಸಂಚಲನ ಸೃಷ್ಟಿಸಿದೆ. ಶಾಲಾ ಕಾರ್ಯಕ್ರಮದ ವೇಳೆ ಭಾಷಣ ಮಾಡಿದ ಕಾಗೆ ಶಾಲೆ ಮಕ್ಕಳಿಗೆ ಹಲವು ಯೋಜನೆಗಳನ್ನ ರೂಪಿಸಲಾಗಿದೆ. ಈ ಯೋಜನೆಗಳು ನಮ್ಮಂತಹ ರಾಜಕಾರಣಿಗಳಿಗೆ ಕಮಿಷನ್ ಹೊಡೆಯೋಕೆ ಅನುಕೂಲ ಮಾಡಿಕೊಟ್ಟಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಇನ್ನು ಇಂತಹ ವೇದಿಕೆಯಲ್ಲಿ ನಾವು ಮಾತನಾಡಬಾರದು. ನಮ್ಮ ಮಾನವನ್ನ ನಾವೇ ತೆಗೆದುಕೊಂಡಂತಾಗುತ್ತದೆ. ಯಾವ ಶ್ರೀಗಳು ಸ್ವಾಮೀಜಿಗಳ ಜೊತೆ ನಮಗೆ ಗೌರವ ಕೊಟ್ಟು ಕರೆದುಕೊಂಡು ಬರಬೇಡಿ. ನಮ್ಮ ಗೌರವವೇನಿದ್ದರು ಹಿತ್ತಲ ಬಾಗಿಲಿಗಷ್ಟೆ ಮೀಸಲು. ಇಷ್ಟರ ಮಟ್ಟಿಗೆ ಇದೀಗ ವ್ಯವಸ್ಥೆ ಕೆಟ್ಟು ಹೋಗಿದೆ. ನಾವ್ಯಾರೂ ಶುದ್ದರೂ ಅಲ್ಲ, ಪವಿತ್ರರೂ ಅಲ್ಲ. ಜಗತ್ತಿನಲ್ಲಿ ಲೂಟಿ ಮಾಡುವವರ ಸ್ಥಾನದಲ್ಲೇ ನಾವೇ ನಂ 1 ಎಂದು ತಮ್ಮನ್ನ ತಾವೇ ಕರೆದುಕೊಂಡಿದ್ದಾರೆ. ರಾಜು ಕಾಗೆಯ ಈ ಹೇಳಿಕೆ ಹಿಂದೆ ಅಡಗಿರುವ ಗೂಡಾರ್ಥವೇನು ಅನ್ನೋ ಅನುಮಾನ ಎಲ್ಲರಿಗೂ ಸೃಷ್ಟಿಯಾಗಿದೆ.