Health tips : ಮೀನಿನ ಬೆಲೆ ಏನು ಕಡಿಮೆ ಇಲ್ಲ. ಕೆಲವರು ಮಾಂಸಕ್ಕಿಂತ ಹೆಚ್ಚಾಗಿ ಮೀನನ್ನು ತಿನ್ನಲು ಇಷ್ಟಪಡುತ್ತಾರೆ. ಅಲ್ಲದೇ ವೈದ್ಯರು ಕೂಡ ಮಟನ್ ಮತ್ತು ಚಿಕನ್ ಬದಲಿಗೆ ಮೀನುಗಳನ್ನು ಹೆಚ್ಚಾಗಿ ತಿನ್ನಲು ಶಿಫಾರಸ್ಸು ಮಾಡುತ್ತಾರೆ.
ಅನೇಕ ಮಂದಿಗೆ ಊಟಕ್ಕೆ ಮೀನು ಇಲ್ಲದಿದ್ದರೆ ಆಹಾರ ಗಂಟಲು ಒಳಗೆ ಹೋಗುವುದೇ ಇಲ್ಲ. ಆದರೆ ಎಷ್ಟು ಮೀನುಗಳನ್ನು ತಿನ್ನಬೇಕು? ಯಾವ ಮೀನು ತಿಂದರೆ ರೋಗ ಬರುತ್ತದೆ ಎಂದು ಎಷ್ಟೋ ಮಂದಿಗೆ ಗೊತ್ತಿಲ್ಲ.
ಅದರಲ್ಲಿಯೂ ಕೆಲ ಮೀನುಗಳನ್ನು ಎಂದಿಗೂ ತಿನ್ನಬಾರದು. ಗರ್ಭಿಣಿಯರು, ಹಾಲುಣಿಸುವ ಮಹಿಳೆಯರು ಮತ್ತು ತಾಯಂದಿರಾಗಲು ಬಯಸುವ ಮಹಿಳೆಯರು ಮೀಥೈಲ್ ಮರ್ಕ್ಯುರಿ ಹೊಂದಿರುವ ಮೀನುಗಳನ್ನು ತಿನ್ನಲೇಬಾರದು.
ಇಂತಹ ವಿಷಕಾರಿ ಪದಾರ್ಥಗಳು ಭ್ರೂಣಗಳು, ಶಿಶುಗಳು ಮತ್ತು ಮಕ್ಕಳ ನರಮಂಡಲದ ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರ ಸೇವನೆ ನಿಮಗೆ ಅಪಾಯವನ್ನುಂಟು ಮಾಡಬಹುದು.
ಮೀನಿನ ನಿಯಮಿತ ಸೇವನೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಕೆಲವು ಮೀನುಗಳಲ್ಲಿ ಮರ್ಕ್ಯೂರಿ ಪ್ರಮಾಣವು ಅಧಿಕವಾಗಿರುತ್ತದೆ. ಇದರೊಂದಿಗೆ ಕೆಲವು ಪ್ರಮುಖ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳಿ.
ಬಂಗುಡೆ ಮೀನು (ಮ್ಯಾಕೆರೆಲ್): ಬಹುತೇಕ ರೆಸ್ಟೋರೆಂಟ್ಗಳಲ್ಲಿ ಬಂಗುಡೆ ಮೀನು ಹೆಚ್ಚಾಗಿ ಸಿಗುತ್ತದೆ. ಆದರೆ ಈ ಬಂಗುಡೆ ಮೀನು ಮರ್ಕ್ಯೂರಿ ಪ್ರಮಾಣವನ್ನು ಹೊಂದಿದೆ ಎಂದು ನಿಮಗೆ ತಿಳಿದಿದ್ಯಾ? ನೀವು ಮ್ಯಾಕೆರೆಲ್ ಅನ್ನು ತಿಂದರೆ, ಆ ಮರ್ಕ್ಯೂರಿ ಪ್ರಮಾಣವು ನಿಮ್ಮ ಹೊಟ್ಟೆಯಲ್ಲಿ ಸಂಗ್ರಹವಾಗುತ್ತಲೇ ಇರುತ್ತದೆ. ಇದು ವಿವಿಧ ಅಪಾಯಕಾರಿ ರೋಗಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಈಗಿನಿಂದಲೇ ಬಂಗುಡೆ ಮೀನಿಂದ ದೂರವಿರಿ.
ಮಗೂರ್ ಮೀನು : ನೀವು ಮಾರುಕಟ್ಟೆಗೆ ಹೋದರೆ ಹೆಚ್ಚಾಗಿ ಮಗೂರ್ ಮೀನುಗಳನ್ನು ಖರೀದಿಸಬೇಡಿ. ಬದಲಿಗೆ ಸಣ್ಣ ಮೀನುಗಳನ್ನು ಖರೀದಿಸಿ. ಏಕೆಂದರೆ ಮಗೂರ್ ಮೀನುಗಳು ವಿವಿಧ ಗಾತ್ರದಲ್ಲಿರುತ್ತವೆ. ಮೀನಿನ ಗಾತ್ರವನ್ನು ತ್ವರಿತವಾಗಿ ಹೆಚ್ಚಿಸಲು, ಕೆಲವೊಮ್ಮೆ ಮೀನು ಕೃಷಿಕರು ಮೀನಿನ ದೇಹಕ್ಕೆ ವಿವಿಧ ಹಾರ್ಮೋನುಗಳನ್ನು ಚುಚ್ಚುತ್ತಾರೆ. ಇದು ಎಲ್ಲರಿಗೂ ಹಾನಿಕಾರಕವಾಗಿದೆ.
ಪಂಕಲ್ಮಾಚ್: ಈ ಎಣ್ಣೆಯುಕ್ತ ಮೀನು ನೀರಿನಲ್ಲಿ ಕಂಡುಬರುವ ಕೈಗಾರಿಕಾ ಮತ್ತು ಕೃಷಿ ತ್ಯಾಜ್ಯದಿಂದ ಬೆಳೆಯುತ್ತದೆ. ಆದ್ದರಿಂದ ಮೀನನ್ನು ಸಂಪೂರ್ಣವಾಗಿ ಕಲುಷಿತ ಎಂದು ಪರಿಗಣಿಸಲಾಗುತ್ತದೆ. ಅದರಲ್ಲಿರುವ ಪಾದರಸದ ಪ್ರಮಾಣವು ಮಾನವ ದೇಹವು ಸಹಿಸಿಕೊಳ್ಳುವಷ್ಟರ ಮಟ್ಟಿಗಿಲ್ಲ. ಹಾಗಾಗಿ ಈ ಮೀನನ್ನು ಎಂದಿಗೂ ತಿನ್ನಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.
ಟ್ಯೂನ ಮೀನು: ಟ್ಯೂನ ಮೀನು ಮೂಲತಃ ವಿದೇಶಿ ಮೀನು. ಈ ಟ್ಯೂನ ಮೀನುಗಳಲ್ಲಿ ಮರ್ಕ್ಯೂರಿ ಪ್ರಮಾಣ ಅಧಿಕವಾಗಿದೆ. ಇದಲ್ಲದೇ, ಈ ಮೀನುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಾರ್ಮೋನುಗಳು ಮತ್ತು ಪ್ರತಿಜೀವಕಗಳನ್ನು ಚುಚ್ಚಲಾಗುತ್ತದೆ. ಹಾಗಾಗಿ ಇದರ ಸೇವನೆ ನಮ್ಮ ಆರೋಗ್ಯಕ್ಕೆ ಹಾನಿಕಾರಕ.
ಮೀನು ಖರೀದಿಸಲು ಟಿಪ್ಸ್: ತಾಜಾ ಮೀನುಗಳನ್ನು ಗುರುತಿಸುವುದು ಹೇಗೆ? ಮೀನಿನ ಚರ್ಮವು ಹಗುರವಾಗಿರುತ್ತದೆ ಮತ್ತು ಕಣ್ಣುಗಳು ಸ್ಪಷ್ಟವಾಗಿರುತ್ತವೆ. ಮೀನಿನ ಬಾಲ ಕೆಳಗೆ ನೇತಾಡುತ್ತಿರುವುದನ್ನು ನೀವು ನೋಡಿದರೆ, ಮೀನು ತಾಜಾವಾಗಿಲ್ಲ ಎಂದು ಅರ್ಥ. ತಾಜಾ ಮೀನುಗಳು ಗಟ್ಟಿಯಾದ ರೆಕ್ಕೆಗಳು ಮತ್ತು ಪ್ರಕಾಶಮಾನವಾದ ಕೆಂಪು ಕಿವಿರುಗಳನ್ನು ಹೊಂದಿರುತ್ತವೆ.