ಬೆಂಗಳೂರು: ನಗರದ ಟೌನ್ಹಾಲ್ನಲ್ಲಿ 2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಆಯುಕ್ತ ತುಷಾರ್ ಗಿರಿನಾಥ್ ಮಂಡಿಸಿದ್ರು. ಬಜೆಟ್ನಲ್ಲಿ ನಗರದ ರಸ್ತೆ ಅಭಿವೃದ್ದಿಗೆ ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ. ಹಾಗಾದ್ರೆ ಬಜೆಟ್ನಲ್ಲಿ ನಗರದ ರಸ್ತೆ ಅಭಿವೃದ್ಧಿಗೆ ಬಜೆಟ್ನಲ್ಲಿ ಸಿಕ್ಕಿದ್ದೆಷ್ಟು?
*ಸಂಚಾರಯುಕ್ತ ರಸ್ತೆಗಳ ಕಾಮಗಾರಿಗೆ ಈಗಾಗಲೇ ಸರ್ಕಾರವು ರೂ.200 ಕೋಟಿಗಳ ಕ್ರಿಯಾ ಯೋಜನೆಯನ್ನು ಅನುಮೋದಿಸಿದೆ. ರೂ.47 ಕೋಟಿ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಉಳಿಕೆ ರೂ.53 ಕೋಟಿ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ರಕ್ಷಣಾ ಇಲಾಖೆಗೆ ಸೇರಿದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ರಸ್ತೆ ನಿರ್ಮಾಣವನ್ನು ಕೈಗೆತ್ತಿಕೊಳ್ಳಬೇಕಾಗಿರುವುದರಿಂದ 2024-25 ಸಾಲಿನಲ್ಲಿ ಕಾಮಗಾರಿಗಳಿಗೆ ರೂ.25 ಕೋಟಿ ವೆಚ್ಚವಾಗುವ ನಿರೀಕ್ಷೆ ಹೊಂದಿದೆ.
*ಬ್ರಾಂಡ್ ಬೆಂಗಳೂರು-ಸುಗಮ ಸಂಚಾರ ಬೆಂಗಳೂರು ಅಡಿಯಲ್ಲಿ ಆರ್.ಎಂ.ಪಿ. ರಸ್ತೆ ಅಗಲೀಕರಣಕ್ಕಾಗಿ ರೂ.50 ಕೋಟಿಗಳನ್ನು ನೀಡಲಾಗಿದೆ. ಇವುಗಳಲ್ಲಿ 8 ಕಾಮಗಾರಿಗಳಿಗೆ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ. ಯೋಜನೆಯ ಪೂರ್ವಭಾವಿ ಭೂ-ಸ್ವಾಧೀನ ನಕ್ಷೆಗಳನ್ನು ಸಿದ್ದಪಡಿಸಲಾಗುತ್ತಿದ್ದು, 2024-25ನೇ ಸಾಲಿನಲ್ಲಿ ರೂ.10 ಕೋಟಿಗಳನ್ನು ಮೀಸಲಿಡಲಾಗಿದೆ.
*ಬ್ರಾಂಡ್ ಬೆಂಗಳೂರು-ಸುಗಮ ಸಂಚಾರ ಬೆಂಗಳೂರು ಅಡಿಯಲ್ಲಿ ಗಾಗಿ ರೂ.100 ಕೋಟಿಗಳನ್ನು ನೀಡಲಾಗಿದೆ. 0.50 ಕೋಟಿಗಳನ್ನು ಕೆ-ರೈಡ್ ಸಂಸ್ಥೆಗೆ ಠೇವಣಿ ರೂಪದಲ್ಲಿ ವರ್ಗಾಯಿಸಲು ನಿರ್ಧಾರ.
ಬ್ರಾಂಡ್ ಬೆಂಗಳೂರು-ಸುಗಮ ಸಂಚಾರ ಬೆಂಗಳೂರು ಅಡಿಯಲ್ಲಿ ಬನಶಂಕರಿ ವೃತ್ತದಲ್ಲಿ ಸಾರಿಗೆ ಆಧಾರಿತ ಅಭಿವೃದ್ಧಿ ಯೋಜನೆಗಾಗಿ ರೂ.50 ಕೋಟಿಗಳನ್ನು ಮೀಸಲಿರಿಸಿದ್ದು, ಬಿ.ಎಂ.ಆರ್.ಸಿ.ಎಲ್. ವತಿಯಿಂದ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ. ಸಂಸ್ಥೆಗೆ ರೂ.50 ಕೋಟಿಗಳನ್ನು ಠೇವಣಿ ನೀಡುವ ಪ್ರಸ್ತಾವನೆಯಿದ್ದು, ಇದೇ ಆರ್ಥಿಕ ವರ್ಷದಲ್ಲಿ ವೆಚ್ಚ ಮಾಡುವ ನಿರೀಕ್ಷೆ.
*ಪಾಲಿಕೆಯ ಎಲ್ಲಾ 8 ವಲಯಗಳಲ್ಲಿ ಮೂಲಭೂತ ಸೌಕರ್ಯ ವಿಭಾಗದಿಂದ ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆಗಳ ದುರಸ್ತಿ ಮತ್ತು ನಿರ್ವಹಣೆಯ ಲೆಕ್ಕಶೀರ್ಷಿಕೆ ಅಡಿಯಲ್ಲಿ 2024-25ನೇ ಸಾಲಿನಲ್ಲಿ ರೂ.47.85 ಕೋಟಿಗಳನ್ನು ನೀಡಲಾಗಿದೆ. ರೂ.47.85 ಕೋಟಿಗಳ ಮೊತ್ತವನ್ನು 2023-24ರಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಬಿಲ್ಲುಗಳಿಗೆ ಮರುಹೊಂದಾಣಿಕೆ ಮಾಡಿ ಒಟ್ಟು ರೂ.791.85 ಕೋಟಿಗಳನ್ನು ಮರುಹೊಂದಾಣಿಕೆ ಮಾಡಲಾಗಿದೆ. 2024-25ನೇ ಸಾಲಿನಲ್ಲಿ ರೂ.150 ಕೋಟಿಗಳನ್ನು ವೆಚ್ಚ ಮಾಡಲು ನಿರ್ಧಾರ.
*900 ಕೋಟಿ ವೆಚ್ಚದಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ಹಾಗೂ 100 ಕೋಟಿ ವೆಚ್ಚದಲ್ಲಿ ಡಾಂಬರೀಕರಣಕ್ಕೆ ಅನುಮೋದನೆ. ಇದಕ್ಕಾಗಿ 300 ಕೋಟಿ ಮೀಸಲು.
*ರಸ್ತೆಗಳ ದುರಸ್ತಿ ಮತ್ತು ನಿರ್ವಹಣೆ, ಪಾದಚಾರಿ ಮಾರ್ಗಗಳು, ಮೇಲ್ಮೈ ಚರಂಡಿ, ಮೇಲು ಸೇತುವೆ ಹಾಗೂ ಸುರಂಗ ಮಾರ್ಗಗಳ ಎಸ್ಕ್ರೋ ಖಾತೆಯಡಿ 25 ಕೋಟಿ ಮೀಸಲು. 20 ಕೋಟಿ ಬಳಕೆಯ ನಿರೀಕ್ಷೆ.