Top Newsರಾಜ್ಯ

ಭೂಗಳ್ಳರ ವಿರುದ್ದ ಬೆಂಗಳೂರು ನಗರ ಜಿಲ್ಲಾಡಳಿತ ಸಮರ

ಬೆಂಗಳೂರು: ಭೂಗಳ್ಳರ ವಿರುದ್ದ ಬೆಂಗಳೂರು ನಗರ ಜಿಲ್ಲಾಡಳಿತ ಸಮರ ಸಾರಿದೆ. ಬೆಂಗಳೂರು ದಕ್ಷಿಣ ಹಾಗೂ ಯಲಹಂಕ ಸುತ್ತಮುತ್ತ ಜಿಲ್ಲಾಡಳಿತ ಭರ್ಜರಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿದೆ.

ಜಿಲ್ಲಾಧಿಕಾರಿ ಜಿ ಜಗದೀಶ್ ನೇತೃತ್ವದಲ್ಲಿ 34.08 ಕೋಟಿ ಅಂದಾಜು ಮೌಲ್ಯದ ಒಟ್ಟು ಎಕರೆ 11ಎಕರೆ 08 ಗುಂಟೆ ಸರ್ಕಾರಿ ಜಮೀನನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ ಅಂತ ಜಿಲ್ಲಾಡಳಿತ ಕಚೇರಿ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದೆ.

ನಗರದ ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಕೆರೆ, ಸರ್ಕಾರಿ ಹೆರಿಗೆ ಆಸ್ಪತ್ರೆ, ಸರ್ಕಾರಿ ಕೆರೆ ಮತ್ತು ಸರ್ಕಾರಿ ಬಂಡೆ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಮಾಡಿದ್ರು.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಮೈಲಸಂದ್ರ ಗ್ರಾಮದ ಸ.ನಂ 75 ರ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0-02 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 50 ಲಕ್ಷಗಳಾಗಿರುತ್ತದೆ.

ಯಲಹಂಕ ತಾಲ್ಲೂಕಿನ ಹೆಸರಘಟ್ಟ-1 ಹೋಬಳಿಯ ಹೆಸರಘಟ್ಟ ಗ್ರಾಮದ ಸ.ನಂ 252 ರ ಸರ್ಕಾರಿ ಹೆರಿಗೆ ಆಸ್ಪತ್ರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0-04 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 40 ಲಕ್ಷಗಳಾಗಿರುತ್ತದೆ.

ಹೆಸರಘಟ್ಟ-2 ಹೋಬಳಿಯ ಕಾಕೋಳು ಗ್ರಾಮದ ಸ.ನಂ 44 ರ ಸರ್ಕಾರಿ ಕೆರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 11 ಎಕರೆಯಾಗಿದ್ದು. ಅಂದಾಜು ಮೌಲ್ಯ 33 ಕೋಟಿಗಳಾಗಿರುತ್ತದೆ.

ಯಲಹಂಕ ಹೋಬಳಿಯ ತಿರುಮೇನಹಳ್ಳಿ ಗ್ರಾಮದ ಸ.ನಂ 32 ರ ಸರ್ಕಾರಿ ಬಂಡೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0-02 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 18 ಲಕ್ಷಗಳಾಗಿರುತ್ತದೆ.

Comments (0)

Your email address will not be published. Required fields are marked *

Back to top button