ಗದಗ: ಕಳೆದ 9ವರ್ಷದಿಂದ ರೈತ ಸೇನೆಯಿಂದ ಮಹದಾಯಿಗಾಗಿ ಹೋರಾಟ ಮಾಡುತ್ತಾ ಬಂದಿದ್ದು, ಕಾನೂನಾತ್ಮಕವಾಗಿಯೂ ಪ್ರಯತ್ನ ನಡೆಸಿದ್ದೇವೆ. ಹಿಂದೆ ಇರುವ ಬಿಜೆಪಿ ಸರ್ಕಾರ ಸರಿಯಾದ ನಿಟ್ಟಿನಲ್ಲಿ ಕೇಲಸ ಮಾಡಿದ್ದರೇ ರೈತರಿಗೆ ಅನ್ಯಾಯವಾಗುತ್ತಿರಲಿಲ್ಲ. ನಾಲ್ಕು ದಿಕ್ಕಿನಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೇಂದ್ರದಿಂದ ಕಾಮಗಾರಿಗೆ ಪರ್ಮಿಷನ್ ಕೋಡಿಸಲು ಆಗಲಿಲ್ಲ. ಬಸವರಾಜ ಬೊಮ್ಮಾಯಿ ಹೋರಾಟದಲ್ಲಿ ಭಾಗವಹಿಸಿ ತಮ್ಮ ಶಕ್ತಿ ಬಳಸಿಕೊಂಡು, ರೈತರಿಗೆ ದ್ರೋಹ ಮಾಡಿದ್ದಾರೆ. ನಾಲ್ಕು ಬಾರಿ ಸಂಸದರಾಗಿ ಪ್ರಹ್ಲಾದ್ ಜೋಶಿ ರೈತರಿಗೆ ದ್ರೋಹ ಮಾಡಿದ್ದಾರೆ. ಜೊತೆಗೆ ಪಿ.ಸಿ ಗದ್ದಿಗೌಡರ, ಸುರೇಶ್ ಅಂಗಡಿ, ಶಿಲ್ಪಾ ಅಂಗಡಿ ಅವರು ಮಹಾದಾಯಿ ಬಗ್ಗೆ ಪ್ರಧಾನಿಗಳ ಹತ್ತಿರ ಚರ್ಚಿಸಲಿಲ್ಲ ಎಂದು ರೈತ ಸೇನೆಯ ರಾಜ್ಯಾಧ್ಯಕ್ಷ ವೀರೇಶ ಸೋರಬದಮಠ ಆಕ್ರೋಶ ವ್ಯಕ್ತಪಡಿಸಿದ್ರು.
2024ರಲ್ಲಿ ಕರ್ನಾಟಕ ಸಮತಾ ಸೇನೆ ಹಾಗೂ ರೈತ ಸೇನೆಯಿಂದ ಕಾಂಗ್ರೇಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಲು ತಿರ್ಮಾನಿಸಿದ್ದೇವೆ. ಮಹಾದಾಯಿ ಯೋಜನೆ ಜಾರಿಯಾಗಲೆಂದು “ರೈಲು ರುಖೋ” ಚಳುವಳಿ ಮಾಡಿ 4ತಾಸು ರೈಲನ್ನು ತಡೆದಿದ್ದೇವೆ. ಆದರೆ, ನಮ್ಮ ಮೇಲೆ ಕೆಸ್ ದಾಖಲಿಸಿ ರೈತರನ್ನು ಬಂಧಿಸುವ ಕೇಲಸ ಮಾಡಿದ್ದಾರೆ. ನರೇಂದ್ರ ಮೋದಿಯವರು ರಾಜಿ ಸೂತ್ರದ ಮೂಲಕ ಸಮಸ್ಯೆ ಬಗೆಹರಿಸುವ ಕೇಲಸ ಮಾಡುತ್ತಿಲ್ಲ. ಕುಡಿಯುವ ನೀರು ಕೋಡುವ ಪ್ರಯತ್ನ ಮಾಡುತ್ತಿಲ್ಲ. ಇವರಿಗೆ ಸಾರ್ವಜನಿಕ ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ ಹಾಗಾಗಿ ಈ ಬಾರಿ ಸಾರ್ವಜನಿಕರು ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ ಬಿಜೆಪಿಯನ್ನು ತಿರಸ್ಕರಿಸಿ ಎಂದು ಮನವಿ ಮಾಡಿದ್ರು.