Top Newsಸುದ್ದಿ

ಸಾಲು ಸಾಲು ಹಬ್ಬಕ್ಕೆ ಸೇಲ್ ಆಗಬೇಕಿದ್ದ ನಕಲಿ ಬ್ರಾಂಡ್ ನ ಲಕ್ಷಾಂತರ ಮೌಲ್ಯ ಬಟ್ಟೆ ಸೀಜ್

ಬೆಂಗಳೂರು: ಮುಂದಿನವಾರ ವರಮಹಾಲಕ್ಷ್ಮೀ ಹಬ್ಬ ಮುಂದಿನ ತಿಂಗಳು ಗೌರಿ ಗಣೇಶ ಹೀಗೆ ಸಾಲು ಸಾಲು ಹಬ್ಬ ಬರ್ತಿದೆ. ಹಬ್ಬಕ್ಕೆ ಭರ್ಜರಿಯಾಗಿ ಶೇಖರಣೆ ಮಾಡಿದ ನಕಲಿ ಬ್ರಾಂಡೇಡ್ ಬಟ್ಟೆ ಫ್ಯಾಕ್ಟರಿ ಮೇಲೆ ಬೇಗೂರು ಪೊಲೀಸ್ರು ದಾಳಿ ನಡೆಸಿದ್ದಾರೆ. ಆದಿತ್ಯ ಬಿರ್ಲಾ ಮಾಲಿಕತ್ವದ ಲೆನಿನ್ ಕ್ಲಬ್ ಬ್ರಾಂಡ್ ಹೆಸ್ರಲ್ಲಿ ಸಾವಿರಾರು ಶರ್ಟ್ ಗಳನ್ನ‌ ನಕಲು ಮಾಡಿ ಅಸಲು ಬ್ರಾಂಡ್ ಕಂಪನಿ ಶರ್ಟ್ ಗಳಂತೆ ಪ್ಯಾಕ್ ಮಾಡಿದ್ರು.

ಈ ಬಗ್ಗೆ ಆದಿತ್ಯ ಬಿರ್ಲಾ ಕಂಪನಿ ಪರವಾಗಿ ಅನ್ವೇಶ್ ಐಪಿಆರ್ ಸರ್ವಿಸ್ ಸಂಸ್ಥೆ ಗುಪ್ತ ಮಾಹಿತಿ ಸಂಗ್ರಹಿಸಿ ಬೇಗೂರು ಪೊಲೀಸ್ರಿಗೆ ದೂರು ನೀಡಿದ್ರು. ದೂರಿನ ಮೇರೆಗೆ ಬೇಗೂರು ಪೊಲೀಸ್ರು ಹೊಂಗಸಂದ್ರ ರಸ್ತೆಯಲ್ಲಿರುವ ಫ್ಯಾಕ್ಟರಿ ಮೇಲೆ ದಾಳಿ ನಡೆಸಿ ಸುಮಾರು ಲಕ್ಷಾಂತರ ಮೌಲ್ಯದ 2000 ಕ್ಕೂ ಹೆಚ್ಚು ಶರ್ಟ್ ಗಳನ್ನ ಸೀಜ್ ಮಾಡಿದ್ದಾರೆ.

ಸಾಕಷ್ಟು ವರ್ಷಗಳಿಂದ ಈ ರೀತಿ ಬ್ರಾಂಡೆಡ್ ಹೆಸ್ರಲ್ಲಿ ನಕಲು ಬಟ್ಟರಗಳನ್ನ ಉತ್ಪಾದಿಸುತ್ತಿದ್ದ ಫ್ಯಾಕ್ಟರಿ ‌ಮಾಲೀಕನನ್ನ ಬೇಗೂರು ಪೊಲೀಸ್ತು ವಶಕ್ಕೆ ಪಡೆದಿದ್ದಾರೆ. ಇನ್ನೂ ನಗರದ ಬಹುತೇಕ ಮಾಲ್, ಮತ್ತು ದೊಡ್ಡ ದೊಡ್ಡ ಬಟ್ಟೆ ಶೋ ರೂಮ್ ಗಳಿಗೆ ಈ ನಕಲಿ ಬ್ರಾಂಡ್ ಬಟ್ಟೆ ಸಪ್ಲೈ ಆಗ್ತಿತ್ತು ಎಂದು ತಿಳಿದು ಬಂದಿದೆ. ಈ ಕುರಿತಿ ಹೆಚ್ಚಿನ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ..

Comments (0)

Your email address will not be published. Required fields are marked *

Back to top button