ಬೆಂಗಳೂರು: ಇಂದು (ಮೇ. 22) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ಸೆಣೆಸಾಡಲಿವೆ. ಈ ವರ್ಷದ ಐಪಿಎಲ್‌ನಲ್ಲಿ ಸತತ 6 ಪಂದ್ಯಗಳನ್ನು ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷದ ಪ್ಲೇಆಫ್‌ಗೆ ಪ್ರವೇಶ ಪಡೆದಿದೆ.
ರಾಜಸ್ಥಾನ ರಾಯಲ್ಸ್ ಜೊತೆಗಿನ ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ, ಚೆನ್ನೈನಲ್ಲಿ ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೆಣಸಲಿದೆ. ಅದು ಗೆದ್ದರೆ ಸೀದಾ ಫೈನಲ್‌ನಲ್ಲಿ ಕೋಲ್ಕತ್ತ ತಂಡದ ಎದುರು ಸೆಣಸಬೇಕಿದೆ. ಹೀಗಾಗಿ ಇಂದಿನ ಗೆಲುವು ತುಂಬಾ ಅವಶ್ಯಕವಾಗಿದೆ. ಈ ಗೆಲುವಿಗಾಗಿ ಆರ್‌ಸಿಬಿ ಅಭಿಮಾನಿಗಳು ಕಾಯುತ್ತಿದ್ದು, ದೇವರ ಮೊರೆ ಹೋಗಿದ್ದಾರೆ.
ದೇವಸ್ಥಾನಗಳಲ್ಲಿ ಆರ್‌ಸಿಬಿ ಅಭಿಮಾನಿಗಳ ಪೂಜೆ
ಐಪಿಎಲ್ ತಂಡಗಳಲ್ಲಿ ಲಾಯಲ್ ಫ್ಯಾನ್ಸ್ ಅನ್ನೋದು ಇದ್ದರೆ ಅದು ಆರ್‌ಸಿಬಿ ಫ್ಯಾನ್ಸ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಸತತ ಸೋಲುಗಳನ್ನು ಕಂಡಾಗಲೂ ಆರ್‌ಸಿಬಿ ಬೆನ್ನಿಗೆ ನಿಂತವರು ಇದೆ ಅಭಿಮಾನಿಗಳು. ಆರ್‌ಸಿಬಿ ತಂಡ ಪ್ಲೇಆಫ್‌ಗೆ ಪ್ರವೇಶಿಸಲಿದೆ ಎಂಬ ಗಟ್ಟಿ ನಂಬಿಕೆಯಲ್ಲಿದ್ದವರು ಇವರು. ಈಗ ಎಲಿಮಿನೇಟರ್ ಮ್ಯಾಚ್ ಕೂಡ ಗೆಲ್ಲಲಿ ಎಂದು ದೇವಸ್ಥಾನಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ.
ಇಂದು ಬೆಳಗ್ಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅನೇಕ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಬೆಂಗಳೂರಿನ ಶಕ್ತಿ ದೇವತೆ ಬನಶಂಕರಿಯಮ್ಮ, ಅಣ್ಣಮ್ಮ ದೇವರು, ರಾಜಾಜಿನಗರದಲ್ಲಿ ದೊಡ್ಡಮ್ಮ ದೇವಿಯ ಜಾತ್ರಾಮಹೋತ್ಸವ ನಡೆಯುತ್ತಿದ್ದು, ಆರ್‌ಸಿಬಿ ಅಭಿಮಾನಿಗಳು ಅಲ್ಲಿಯೂ ವಿಶೇಷ ಪೂಜೆ ಮಾಡಿಸಿದ್ದಾರೆ.
ಪಬ್‌ಗಳಲ್ಲಿ ಸಖತ್ ಆಫರ್
ಇನ್ನೊಂದು ಕಡೆ ಆರ್‌ಸಿಬಿ ಅಭಿಮಾನಿಗಳನ್ನು ಸೆಳೆಯಲು ಸಿಲಿಕಾನ್ ಸಿಟಿಯ ಪಬ್ ಮತ್ತು ರೆಸ್ಟೋರೆಂಟ್‌ಗಳು ಸಕತ್ ಅಫರ್ ನೀಡುತ್ತಿವೆ. ತಮ್ಮ ತಮ್ಮ ಪಬ್‌ಗಳಿಗೆ ಸೆಳೆಯಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ರೆಸಾರ್ಟ್‌ಗಳು, ಪಬ್‌ಗಳಲ್ಲಿ ಎಲ್‌ಇಡಿ ಸ್ಕ್ರೀನಿಂಗ್ ಅಳವಡಿಸಲಾಗಿರುತ್ತದೆ. ಅದರ ಜೊತೆಗೆ ಮತ್ತಷ್ಟು ಆಫರ್ ನೀಡುತ್ತಿವೆ.
ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ಪಂದ್ಯದ ಲೈವ್ ನೋಡುತ್ತಾ ಏಂಜಾಯ್ ಮಾಡಲು ಹಲವು ಪಬ್‌ಗಳಲ್ಲಿ 1+1 ಆಫರ್ ನೀಡಲಾಗುತ್ತಿದೆ. ಇದಲ್ಲದೆ ಹ್ಯಾಪಿ ಅವರ್ಸ್‌ಗಳನ್ನು ನೀಡಲಾಗಿದೆ. ಬಿಲ್ ಮೇಲೆ ಡಿಸ್ಕೌಂಟ್ ಕೂಡ ನೀಡುತ್ತಾರಂತೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ತಮ್ಮ ಗ್ಯಾಂಗ್ ಜೊತೆಯಲ್ಲಿ ಇಂದಿನ ಪಂದ್ಯ ಏಂಜಾಯ್ ಮಾಡುವುದಂತು ಗ್ಯಾರಂಟಿ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com


