Top Newsಸುದ್ದಿ

ಗಣೇಶ ವಿಸರ್ಜನೆ ವೇಳೆ ಅವಘಡ; ತಂದೆ, ಮಗ ಸೇರಿ ಮೂವರು ಸಾವು

ತುಮಕೂರು: ಗಣೇಶನ ವಿಸರ್ಜನೆ ಮಾಡುವಾಗ ನೀರಿನಲ್ಲಿ ಮುಳುಗಿ ತಂದೆ, ಮಗ ಹಾಗೂ ಓರ್ವ ಯುವಕ ಸಾವನ್ನಪ್ಪಿದ್ದಾರೆ.

ಈ ಘಟನೆ ತುರುವೇಕೆರೆ ತಾಲೂಕಿನ ಮಾರಸಂದ್ರ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ನಡೆದಿದೆ.

ಗ್ರಾಮದ ರೇವಣ್ಣ (ತಂದೆ), ಇವರ ಮಗ ಶರತ್ ಹಾಗೂ ದಯಾನಂದ್ ಎನ್ನುವ ಯುವಕ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಗಣೇಶ ಉತ್ಸವವನ್ನು ಸಂಭ್ರಮದಿಂದ ನೆರವೇರಿಸಲಾಗಿತ್ತು. ಬಳಿಕ ಮೆರವಣಿಗೆ ಮಾಡಿದ ನಂತರ ಗಣೇಶನನ್ನು ಕೆರೆಯ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತು. ಈ ವೇಳೆ ಕೆರೆಯ ನೀರಿನಲ್ಲಿ ಮುಳುಗಿ ತಂದೆ, ಮಗ ಹಾಗೂ ಯುವಕ ಸಾವನ್ನಪ್ಪಿದ್ದಾರೆ.

ದಂಡಿನಶಿವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಟಿ, ಪರಿಶೀಲನೆ ನಡೆಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button