ಬೆಂಗಳೂರು : ನೆನ್ನೆ ಹನುಮ ಜಯಂತಿ ಎಲ್ಲಿ ನೋಡಿದರೂ ಸಹ ಹನುಮ ಜಯಂತಿ ಆಚರಣೆ ಇತ್ತು. ಇದೇ ರೀತಿ ಬೆಂಗಳೂರು ಹೊರಬಲಯದ ಹೊಸಕೋಟೆ ಪಟ್ಟಣದಲ್ಲೂ ಸಹ ಹನುಮ ಜಯಂತಿ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಈ ಪ್ರಸಾದ ಸ್ವೀಕರಿಸಿದ ಸುಮಾರು ನೂರಕ್ಕೂ ಹೆಚ್ಚು ಮಂದಿ ಹೊಸಕೋಟೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಫುಡ್ ಪಾಯಿಸನ್ ನಿಂದ ಈ ಘಟನೆ ನಡೆದಿದೆ. ನಗರದ ವೆಂಕಟರಮಣ ಸ್ವಾಮಿ ಊರು ಬಾಗಿಲು ಆಂಜನೇಯ ಸ್ವಾಮಿ ಹಾಗೂ ಕೋಟೆ ಬಾಗಿಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಭಕ್ತರು ಪುಳಿಯೋಗರೆ ಪಾಯಸ ಲಡ್ಡು ಸೇವನೆ ಮಾಡಿದ್ದಾರೆ. ಪ್ರಸಾದ ಸೇವಿಸಿದ ಬಳಿಕ ಜನರು ಅಸ್ವಸ್ಥರದವರನ್ನು ಸ್ಥಳೀಯ ಅಸ್ಪತ್ರೆ ದಾಖಲಿಸಲಾಗಿತ್ತು. ಇದೀಗ ಅಸ್ವಸ್ಥರಾಗಿದ್ದವರ ಫೈಕಿ ಒಬ್ಬ ಮಹಿಳೆ ಸಿದ್ದಮ್ಮ ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ
ಹೊಸಕೋಟೆ ಹಾವಲಹಳ್ಳಿ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಸರ್ಕಾರಿ ಆಸ್ಪತ್ರೆ ಸೇರಿದಂತೆ ಸುತ್ತಮುತ್ತಲ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ಸಹ ಆಸ್ವಸ್ಥರಾದವರು ದಾಖಲಾಗಿದ್ದಾರೆ. ಇನ್ನು ಈ ಬಗ್ಗೆ ತಾಲೂಕು ವೈದ್ಯಾಧಿಕಾರಿಗಳಿಂದ ಯಾವುದೇ ರೀತಿಯ ಒಂದು ಮಾಹಿತಿ ಸಹ ಪೊಲೀಸರಿಗೆ ದೊರೆತಿರಲಿಲ್ಲ. ನಂತರ ಮಾಹಿತಿ ದೊರೆತ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗಳಿಂದ ಪೊಲೀಸರು ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈ ಮಧ್ಯೆ ಹೊಸಕೋಟೆ ನಗರದ ಕಾವೇರಿ ನಗರ ನಿವಾಸಿ ಸಿದ್ದಗಂಗಮ್ಮ ಎಂಬುವರು ಸ್ಥಳೀಯ ಸಿಲಿಕಾನ್ ಸಿಟಿ ಎಂಬ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಸದ್ಯ ಮೃತರಾಗಿದ್ದಾರೆ. ಅಲ್ಲದೆ ಸುಮಾರು 15ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.
ದೇವರ ದರ್ಶನಕ್ಕೆಂದು ಹೋಗಿ ದೇವಾಲಯದ ಪ್ರಸಾದವನ್ನು ಸೇವಿಸಿ ಇಷ್ಟು ಮಂದಿ ಆಸ್ಪತ್ರೆ ಪಾಲಾಗಿದ್ದು ನಿಜಕ್ಕು ವಿಷಾಧವೇ ಸರಿ ಈ ಬಗ್ಗೆ ಸೂಕ್ತ ಮಾಹಿತಿ ಕಲೆ ಹಾಕಿ ಅಧಿಕಾರಿಗಳು ಮತ್ತಾವುದು ಸಾವು ನೋವುಗಳು ಸಂಭವಿಸದಂತೆ ಎಚ್ಚರ ವಹಿಸಬೇಕಿದೆ …