ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಬಂಧನವಾಗಿ 80 ದಿನಗಳು ಕಳೆದಿವೆ. ಸೋಮವಾರ ಕೋರ್ಟ್ ಇನ್ನೂ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಇದರ ನಡುವೆ ಪ್ರಕರಣದಲ್ಲಿ ಪೊಲೀಸರು ಕೋರ್ಟ್‌ಗೆ ಸಲ್ಲಿಕೆ ಮಾಡಿರುವ 3991 ಪುಟಗಳ ಚಾರ್ಜ್‌ಶೀಟ್ ಮಾಧ್ಯಮಗಳಿಗೆ ಲಭ್ಯವಾಗಿದೆ.
ದರ್ಶನ್ ವಿಚಾರದಲ್ಲಿ ಇಷ್ಟೆಲ್ಲಾ ಆಗಿರುವ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಕೂಡ ಗಂಡನ ಪ್ರತಿ ಹೆಜ್ಜೆಗೆ ಸಾಥ್ ನೀಡಿದ್ದರು. ಒಳ್ಳಾರಿಯವರೆಗೂ ಹೋಗಿ ಗಂಡನನ್ನು ಮಾತನಾಡಿಸಿಕೊಂಡು ಬರುತ್ತಿದ್ದ ಅವರು ಹೊರಗಡೆ ಪಾರ್ಟಿಗೆಲ್ಲಾ ಹೋಗೋದು ಬಹಳ ಕಡಿಮೆಯೇ ಆಗಿತ್ತು.
ದರ್ಶನ್ ಬಂಧನವಾದ ಬಳಿಕದಿಂದ ಅವರ ಪತ್ನಿ ವಿಜಯಲಕ್ಷ್ಮೀ ಪತಿಯ ಸಂಕಷ್ಟ ದೂರವಾಗಲು ಹತ್ತಾರು ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದ್ದಾರೆ. ಜೈಲಿಗೆ ಅನೇಕ ಸಲಿ ಭೇಟಿಯಾಗಿ ಪತಿಗೆ ಧೈರ್ಯ ತುಂಬಿದ್ದಾರೆ. ಜೈಲಿಗೆ ಹೋಗಿ ಪತಿ ದರ್ಶನ್ ಅವರನ್ನು ಭೇಟಿ ನೀಡಿದ ಬಳಿಕ ಭಾವುಕರಾಗಿದ್ದ ವಿಜಯಲಕ್ಷ್ಮೀ ಇತ್ತೀಚೆಗೆ ತನ್ನ ಆತ್ಮೀಯ ಸ್ನೇಹಿತೆಯೊಬ್ಬಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿರುವ ಫೋಟೋಗಳು ವೈರಲ್ ಆಗಿದೆ.
ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ದರ್ಶನ್ ಅದರಲ್ಲಿನ ಸಾಕ್ಷ್ಯಗಳನ್ನು ನೋಡಿ ಏನು ಮಾಡುವುದೆನ್ನುವ ಚಿಂತೆಯಲ್ಲಿದ್ದಾರೆ. ಆದರೆ ಅವರ ಪತ್ನಿ ವಿಜಯಲಕ್ಷ್ಮೀ ಶ್ರುತಿ ರಮೇಶ್ ಕುಮಾರ್ ಸ್ನೇಹಿತೆಯ ಬರ್ತ್ ಡೇ ಪಾರ್ಟಿಯಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.
ವಿಜಯಲಕ್ಷ್ಮೀ ಪಾರ್ಟಿಯಲ್ಲಿ ಆಪ್ತ ಗೆಳತಿಗೆ ಕೇಕ್ ತಿನ್ನಿಸಿ ತಾವು ಕೇಕ್ ತಿಂದು, ಅಪ್ಪಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಶ್ರುತಿ ರಮೇಶ್ ಕುಮಾರ್ ಅವರಿಗೆ ವಿಶ್ ಮಾಡುವ ಫೋಟೋಗಳು ಕೂಡ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಇನ್ನು ಈ ಫೋಟೋಗೆ ಕಾಮೆಂಟ್ ಮಾಡಿರುವ ನೆಟ್ಟಿಗರು, ಅಣ್ಣ ಒಳಗಿದ್ದರೂ, ಅತ್ತಿಗೆ ಫುಲ್ ಕೂಲ್ ಆಗಿದ್ದಾರೆ.ಅಣ್ಣಂಗೂ ಕೇಕ್ ಕೊಡ್ತಿರಾ ಎಂದು ಕಾಲೆಳೆದಿದ್ದಾರೆ. ಇಷ್ಟೇ ಕಣ್ರೋ ಜೀವನ, ದುಡ್ಡು ಇರೋವರ ಮನೆ ಕಥೆನೇ ಇಷ್ಟು ಎಂದು ಕಾಮೆಂಟ್ ಮಾಡಿದ್ದಾರೆ.
- Freedom TVhttps://freedomtvlive.com/author/freedomtv/
- Freedom TVhttps://freedomtvlive.com/author/freedomtv/
- Freedom TVhttps://freedomtvlive.com/author/freedomtv/
- Freedom TVhttps://freedomtvlive.com/author/freedomtv/