ರಾಜ್ಯ

ಬಂಡೀಪುರದಲ್ಲಿ ಬೃಹತ್ ಹೋರಾಟ

ಬಂಡೀಪುರದಲ್ಲಿ ವಾಹನಗಳ ರಾತ್ರಿ ಸಂಚಾರಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.. 2018ರಲ್ಲಿ ರಾಜ್ಯ ಸರ್ಕಾರದಿಂದ ರಾತ್ರಿ ಸಂಚಾರಕ್ಕೆ ನಿಷೇಧ ಜಾರಿಯಲ್ಲಿದೆ. 2019 ರಲ್ಲಿ ರಾಜ್ಯ ಸರ್ಕಾರದಿಂದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ಹಿಂದೆ ಕೇರಳದಲ್ಲಿ ಡಿಕೆ ಶಿವಕುಮಾರ್ ರವರು ಕೇರಳ ಜನತೆಗೆ ರಾತ್ರಿ ಸಂಚಾರ ತೆರೆವು ಗೊಳಿಸುವುದಾಗಿ ಆಶ್ವಾಸನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿಯವರ ಒತ್ತಡವೂ ಸಹ ಇದೆ ಎಂದು ಪರಿಸರವಾದಿಗಳು ತಿಳಿಸಿದ್ದಾರೆ.

ರಾತ್ರಿ ವೇಳೆಯಲ್ಲಿ ಅನಧಿಕೃತ ಸಾಗಾಣೆ ನಡೆಸುವುದಾಗಿ ತಿಳಿದು ಬಂದಿದೆ. ಸರ್ಕಾರ ನೀಡುವ ರೇಷನ್ ಅಕ್ಕಿ, ಮಾದಕ ವಸ್ತುಗಳಾದ ಗಾಂಜಾ ಸ್ಪಿರಿಟ್ ಹಾಗೂ ಇಲ್ಲಿನ ಫಲವತ್ತಾದ ಕೆರೆಯ ಮಣ್ಣು ಮತ್ತು ಗಣಿಯ ಕಲ್ಲುಗಳು ಹಾಗೂ ಮಾಂಸಕ್ಕಾಗಿ ದನಗಳು ಇಲ್ಲಿಂದ ರವಾನೆ ಆಗುತ್ತಿವೆ. ಅಲ್ಲಿಂದ ಅಕ್ರಮವಾಗಿ ಲಾಟರಿ ಸಹ ಇಲ್ಲಿಗೆ ಬರುತ್ತಿದೆ. ವಾಹನಗಳ ರಾತ್ರಿ ಸಂಚಾರದಿಂದ ಪ್ರಾಣಿಗಳ ಓಡಾಟಕ್ಕೆ ಹಾಗೂ ಸ್ವಚ್ಛಂದತೆಗೆ ಭಂಗ ಉಂಟಾಗುವುದೆಂದು ಪರಿಸರವಾದಿಗಳ ವಾದವಾಗಿದೆ.

ವರದಿ: ಜೀಜಿ ಶಶಿಕಾಂತ್

Comments (0)

Your email address will not be published. Required fields are marked *

Back to top button