ಕಲಬುರಗಿ: ದೇಶದಲ್ಲಿ ಮೊದಲ ಹಂತದ ಚುನಾವಣೆ ಮುಗಿದ ಬಳಿಕ ಮೋದಿ ಹತಾಶರಾಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಪ್ರಧಾನಿಗಳು ತಮ್ಮ ಖುರ್ಚಿ ಘನತೆ ಬಿಟ್ಟು ಮಾತನಾಡುತ್ತಿದ್ದಾರೆ. ಎಲ್ಲಾ ಕಡೆಗಳಲ್ಲಿ ಸುಳ್ಳು ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಮೋದಿ ಬರೋದಿಕ್ಕಿಂತ ಮುಂಚೆ ಕಾಶ್ಮೀರದಲ್ಲಿ ಸಂವಿದಾನವೇ ಇರಲಿಲ್ಲ ಅಂತಾರೆ. ರಾಜಾಸ್ಥಾನದಲ್ಲಿ ಹನುಮಾನ ಹೆಸರಿನಲ್ಲಿ ಮತ ಕೇಳ್ತಾರೆ. ಅಲ್ಲಿ ನಮ್ಮ ರಾಜ್ಯದ ಮಾನ ಹರಾಜಾಕಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಮುಸ್ಲಿಂ ಮೀಸಲಾತಿ ಹೆಚ್ಚಿಗೆ ಮಾಡಿದ್ದೆವೆ ಎಂದು ಹೇಳ್ತಾರೆ. ಮೀಸಲಾತಿ ವಿಚಾರದಲ್ಲಿ ಚೆಲ್ಲಾಟವಾಡಿದ್ದೆ ರಾಜ್ಯ ಬಿಜೆಪಿ. ಎಲ್ಲಾ ಕಡೆ ನಿಮ್ಮ ಬಣ್ಣ ಬಯಲಾಗಿದೆ. ಸ್ವಲ್ಪನಾದರು ಕಾಮನ್ ಸೆನ್ಸ್ ಇದಿಯಾ ಬಿಜೆಪಿಯವರಿಗೆ..? ಎಂದು ಕಿಡಿಕಾರಿದರು.
ಮೋದಿಯವರು ಕೂಡಾ ಕರಿಮಣಿ ಮಾಲೀಕರಾಗಿದ್ರಲ್ವಾ. ಇವರಿಗೆ ಮಂಗಳ ಸೂತ್ರದ ಬೆಲೆ ಗೊತ್ತಾ..? ದೇಶದ ಜನ ತಮ್ಮ ಒಡೆವೆ, ಆಭರಣ ಮಾರಿದ್ದು ನಿಮ್ಮ ಮಾಸ್ಟರ್ ಸ್ಟ್ರೋಕ್ ಇಂದ. ನಾಲ್ಕು ದಶಕದಲ್ಲಿ ಇದೇ ಮೊದಲ ಭಾರಿ ಇಷ್ಟೊಂದು ನಿರೂದ್ಯೋಗ ಸಮಸ್ಯೆ ಎದುರಾಗಿದೆ. ಅದಕ್ಕೆ ನಮ್ಮ ಜನ ಒಡವೆ ಜಮೀನು ಮಾರಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಿ ರಾಜ್ಯದ ಹಿತ ಕಾಪಡಿದ್ದಾರೆ ಅಂತ ಬಿಜೆಪಿ ಟ್ವೀಟ್ ಮಾಡುತ್ತೆ. ಬಿಜೆಪಿಯವರು ಬಂಡ ನನ್ನಮಕ್ಕಳು ರಾಜ್ಯಕ್ಕೆ ಆಮಿತ್ ಶಾ ಬಂದಾಗ ಏನ್ ಹೇಳಿದ್ದರು. ನಾವು ಮನವಿಯನ್ನೆ ತಡವಾಗಿ ಕೊಟ್ಟಿದ್ದೆವೆ ಎಂದರು. ಇವಾಗ ರಾಜ್ಯದ ಹಿತ ಕಾಪಡುತ್ತಾರೆ ಎನ್ನುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.