ಬೆಂಗಳೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಕಾವೇರಿ ನೀರು ಬಳಸುವಂತಿಲ್ಲ. ಕುಡಿಯುವುದು ಮತ್ತು ದಿನನಿತ್ಯದ ಬಳಕೆಗೆ ಮಾತ್ರ ಕಾವೇರಿ ನೀರು ಬಳಸಬೇಕು. ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುವುದು.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಕಾವೇರಿ ನೀರು ಬಳಸೋ ಹಾಗಿಲ್ಲ. ಒಂದು ವೇಳೆ ಕಾವೇರಿ ನೀರನ್ನು ಗಣೇಶ ಮೂರ್ತಿ ವಿಸರ್ಜನೆಗೆ ಬಳಕೆ ಮಾಡಿದಲ್ಲಿ ಅಂಥವರಿಗೆ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಎಚ್ಚರಿಕೆ ನೀಡಿದೆ.

ಬೆಂಗಳೂರಿನ ಜನತೆಗೆ ಕುಡಿಯಲು ಹಾಗೂ ನಿತ್ಯ ಬಳಕೆಗೆ ಉಪಯೋಗಿಸಲು ಮಾತ್ರ ಕಾವೇರಿ ನೀರನ್ನು ಸರಬರಾಜು ಮಾಡಲಾಗುತ್ತದೆ. ಆದರೆ, ಕಾವೇರಿ ನೀರನ್ನು ಅತನ್ಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಕಠಿಣ ಕ್ರಮವನ್ನು ಕೈಗೊಂಡಿದೆ. ಬಯಲು ಸೀಮೆ, ಬಿಸಿಲ ನಾಡು ಬಳ್ಳಾರಿಯ ಜಿಲ್ಲಾಧಿಕಾರಿ ಆಗಿದ್ದ ಐಎಎಸ್ ಅಧಿಕಾರಿ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಬೆಂಗಳೂರು ಜಲಮಂಡಳಿಗೆ ಅಧ್ಯಕ್ಷರಾಗಿ ಬಂದ ನಂತರ ಕಾವೇರಿ ನೀರಿನ ಸದ್ಬಳಕೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ.

ಕಳೆದ ವರ್ಷ ರಾಜ್ಯದಲ್ಲಿ ಆವರಿಸಿದ್ದ ಭೀಕರ ಬರಗಾಲದಿಂದಾಗಿ ಜನವರಿ ತಿಂಗಳಿಂದ ಜೂನ್ ತಿಂಗಳವರೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಆಹಾಕಾರ ಶುರುವಾಗಿತ್ತು. ಈ ವೇಳೆ ಕಾವೇರಿ ನೀರನ್ನು ಕುಡಿಯಲು ಮತ್ತು ದಿನಬಳಕೆಗೆ ಬಿಟ್ಟರೆ ಬೇರಾವ ಉದ್ದೇಶಕ್ಕೂ ಬಳಕೆ ಮಾಡದಂತೆ ನಿರ್ಬಂಧ ಹೇರಲಾಗಿತ್ತು. ಈ ವೇಳೆ ಮನೆಯ ಮುಂದಿನ ಗಾರ್ಡನ್, ಕೈತೋಟ, ಹೂ ಕುಂಡಗಳು, ಬೈಕ್ ಮತ್ತು ಕಾರನ್ನು ತೊಳೆಯಲು, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕಾವೇರಿ ನೀರನ್ನು ಬಳಸದಂತೆ ಕಠಿಣ ಆದೇಶ ಹೊರಡಿಸಿದ್ದರು. ಜೊತೆಗೆ, ನಿರ್ಬಂಧದ ನಡುವೆಯೂ ಕಾವೇರಿ ನೀರನ್ನು ದುರುಪಯೋಗ ಮಾಡಿದ್ದವರಿಗೆ ದಂಡವನ್ನೂ ವಿಧಿಸಿದ್ದರು.

Leave a Reply

Your email address will not be published. Required fields are marked *

Verified by MonsterInsights