#Exclusive NewsTop Newsರಾಜಕೀಯರಾಜ್ಯಸುದ್ದಿ
ಶ್ರೀರಾಮುಲು V/s ರೆಡ್ಡಿ ಬಡಿದಾಟ ಹಿನ್ನೆಲೆ ; ಬೆಂಗಳೂರಿನಲ್ಲಿ ನಮ್ದೂ ಗ್ಯಾಂಗ್ ಇದೆ..!

ಬೆಂಗಳೂರಿನಲ್ಲಿ ನಮ್ದೂ ಒಂದು ಬಿಜೆಪಿ ಶಾಸಕರ ಗ್ಯಾಂಗ್ ಇದೆ.ಹೈಕಮಾಂಡ್ ತೀರ್ಮಾನ ಮಾಡಿಲ್ಲ ಅಂದ್ರೆ ನಾವು ತಿರುಗಿ ಬೀಳುತ್ತೇವೆ ಎಂದು ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಹೈ ಕಮಾಂಡ್ ಗೆ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯಲ್ಲಿ ಶ್ರೀರಾಮುಲು ವರ್ಸಸ್ ರೆಡ್ಡಿ ಬಡಿದಾಟ ವಿಚಾರವಾಗಿ ಮಾತನಾಡಿದ ಶಾಸಕ ಅವರ ವೈಯಕ್ತಿಕ ವಿಚಾರವನ್ನ ಪಾರ್ಟಿಗೆ ಗಂಟಾಕುವ ಕೆಲಸ ಮಾಡಬಾರದು.ಜೊತೆಯಲ್ಲಿ ಇದ್ದಾಗ ವ್ಯವಹಾರ ಹಾಗೂ ರಾಜಕೀಯ ಮಾಡಿದ್ದಾರೆ.ವ್ಯವಹಾರಗಳಲ್ಲಿ ವ್ಯತ್ಯಾಸ ಮಾಡಿಕೊಂಡು ಈಗ ಪಾರ್ಟಿಗೆ ಗಂಟು ಹಾಕೋದು ನಾನು ಒಪ್ಪೋದಿಲ್ಲ.
ಇವರಿಬ್ಬರ ಜಗಳದಲ್ಲಿ ಕೆಲ ನಮ್ಮ ಹಿರಿಯ ನಾಯಕರೂ ಕಡ್ಡಿ ಅಲ್ಲಾಡಿಸೊ ಕೆಲಸ ಮಾಡುತ್ತಿದ್ದಾರೆ.ಇವರಿಗೆ ಮುಂದಿನ ದಿನಗಳಲ್ಲಿ ಸಿಎಂ ಸ್ಥಾನಕ್ಕೆ ಬೀಳುವ ತೆವಲಿದ್ಯಾ ಅಂತ ನನಗೆ ಗೊತ್ತಿಲ್ಲ,ಆದರೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿ ಅಂತ ನೋಡುತ್ತಿದ್ದೇವೆ ಎಂದು ಯಲಹಂಕದಲ್ಲಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.




