ಬೆಂಗಳೂರು : ರೈತರ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವ ಶಿವಾನಂದ್ ಪಾಟೀಲ್ ರವರ ರಾಜೀನಾಮೆ ಪಡೆಯಬೇಕುಎಂದು ಸರ್ಕಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಆಗ್ರಹಿಸಿದರು. ನಿನ್ನೆ ಚಿಕ್ಕೋಡಿಯಲ್ಲಿ ಮಾತನಾಡಿದ ಶಿವಾನಂದ್ ಪಾಟೀಲ್ ರೈತರು ಬರಗಾಲ ಬರಲಿ ಎಂದು ಯಾವಾಗಲೂ ಬಯಸುತ್ತಾರೆ, ಬರಗಾಲ ಬಂದ್ರೆ ಸಾಲ ಮನ್ನಾ ಆಗುತ್ತೆ ಎಂದು ಬಯಸುತ್ತಾರೆ.
ಕೃಷ್ಣಾ ನದಿ ನೀರು ಪುಕ್ಕಟೆ ಆಗಿದೆ ಕರೆಂಟ್ ಪುಕ್ಕಟೆ ಸಿಗುತ್ತಿದೆ. ಬಹಳಷ್ಟ ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬೀಜನೂ ಕೊಟ್ಟರು, ಗೊಬ್ಬರನೂ ಕೊಟ್ಟರು. ಇನ್ನೂ ರೈತರಿಗೆ ಏನಪ್ಪಾ ಅಂದ್ರೆ ಒಂದು ಆಸೆ ಇರುತ್ತೆ, ಮಗನ್ ಮ್ಯಾಲ ಮ್ಯಾಲ ಬರಗಾಲ ಬೀಳಲಿ ಅಂತ ಹೇಳಿ. ಯಾಕಂದ್ರೆ ಸಾಲ ಮನ್ನಾ ಗುತ್ತೆ ಅಂತಾ ರೈತರ ಬಗ್ಗೆ ಹಗುರವಾಗಿ ಮಾತಾನಾಡಿದ್ದಾರೆ.
ಈ ಹೇಳಿಕೆ ಸದ್ಯ ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವರ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿದೆ. ಸರ್ಕಾರದ ಎಲ್ಲಾ ಸಚಿವರ ನಡವಳಿಕೆಗೆಗಳು ರಾಜ್ಯದ ಜನ ತಲೆತಗ್ಗಿಸುವ ಕೆಲಸವಾಗಿದೆ. ಮೊದಲೇ ರಾಜ್ಯದಲ್ಲಿ ರಾಜಕಾರಣಿಗಳ ಬಗ್ಗೆ ಜನ ಉಡಾಫೆಯಿಂದ ಮಾತನಾಡ್ತಾರೆ ನಾನು ಸಿದ್ದರಾಮಯ್ಯರವರಿಗೆ ಆಗ್ರಹ ಮಾಡ್ತೇನೆ ಕೂಡಲೇ ಶಿವಾನಂದ್ ಪಾಟೀಲ್ ಕ್ಷಮೆ ಕೇಳಬೇಕು ಸಾಧ್ಯವಾದರೆ ರಾಜೀನಾಮೆ ತೆಗೆದುಕೊಳ್ಳಿ ಎಂದು ಆಗ್ರಹಿಸಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಸಚಿವ ಶಿವಾನಂದ್ ಪಾಟೀಲ್ ವಿರುದ್ದ ಕಿಡಿ ಕಾರಿದ್ದಾರೆ.
ಸಚಿವ ಶಿವಾನಂದ್ ಪಾಟೀಲ್ ಹೇಳಿಕೆ ವಿರುದ್ದ ಮಾತಾನಾಡಿರುವ ಸಿಟಿ ರವಿ, ರೈತರಿಗೆ ಅಪಮಾನ ಮಾಡಿದಂತಿದೆ. ಸಚಿವರ ಬಾಯಿಯಿಂದ ಬರ್ತಾ ಇರೋ ಮಾತು ಸಹನೀಯವಲ್ಲ, ರೈತರು ಬರಗಾಲಕ್ಕೆ ಕಾಯುತ್ತಾರೆ ಅನ್ನೋ ಮಾತಾಡಿ ರೈತರಿಗೆ ಅವಮಾನಿಸಿದ್ದಾರೆ.
ಹಿಂದೆ ನೋಟುಗಳನ್ನ ಮೈಮೇಲೆ ತೂರಿಸಿಕೊಂಡಿರೋದನ್ನ ನಾವು ನೋಡಿದ್ದೇವೆ. ಇವರನ್ನ ಮಂತ್ರಿಯನ್ನಾಗಿ ಮುಂದುವರೆಸಿದ್ರೆ ಅದರ ಪಾಪದ ಹೊಣೆಯನ್ನ ಕಾಂಗ್ರೆಸ್ ಹೊರಬೇಕಾಗುತ್ತೆ, ಇದು ಅಧಿಕಾರದ ಅಹಂಕಾರದ ಭಾವನೆಯಿಂದ ಈ ಮಾತನ್ನ ಆಡ್ತಿದ್ದಾರೆ. ಅಧಿಕಾರದ ಮದ ಏರಿದೆ, ಸಿಎಂ ಸಿದ್ದರಾಮಯ್ಯಗೆ ಕೇಳ್ತಿನಿ ನೀವೆ ಅವರ ಮದ ಇಳಿಸ್ತೀರೋ ಅಥವಾ ಜನರೇ ಇಳಿಸಬೇಕಾ ಶಿವಾನಂದ್ ಪಾಟೀಲ್ ಒಂದು ಕ್ಷಣ ಮಂತ್ರಿ ಸ್ಥಾನದಲ್ಲಿಇರೋಕೆ ಯೋಗ್ಯರಲ್ಲ, ಅವರನ್ನ ಕೂಡಲೇ ಸಂಪುಟದ ರಿಂದ ವಜಾಮಾಡಿ ಎಂದು ಸಿ.ಟಿರವಿ ಸರ್ಕಾರಕ್ಕೆ ಆಗ್ರಹಿಸಿದರು.