Wednesday, April 30, 2025
24.6 C
Bengaluru
LIVE
ಮನೆ#Exclusive Newsಬಿ.ಎಲ್​. ಸಂತೋಷ್ ಅವರದ್ದು ನಿಸ್ವಾರ್ಥ ದೇಶ ಸೇವೆ : ಎಚ್‌.ಡಿ. ದೇವೇಗೌಡ

ಬಿ.ಎಲ್​. ಸಂತೋಷ್ ಅವರದ್ದು ನಿಸ್ವಾರ್ಥ ದೇಶ ಸೇವೆ : ಎಚ್‌.ಡಿ. ದೇವೇಗೌಡ

ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮಶತಮಾನೋತ್ಸವ ಸಮಾರಂಭ ಡಿ. 25ರಂದು ಸಂಜೆ ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆ ವತಿಯಿಂದ ಬುಧವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸುಶಾಸನ ದಿನ’ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಮಾತನಾಡಿದರು. ಇದೇ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಹಾಜರಿದ್ದರು.

ಸುಮಾರು ಒಂದು ಗಂಟೆ ಕಾಲ ಬಿ.ಎಲ್‌. ಸಂತೋಷ್‌ ಭಾಷಣ ಆಲಿಸಿದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ “ತಮ್ಮ ಭಾಷಣದ ಸರದಿ ಬಂದಾಗ, ಸಂತೋಷ್ ಅವರ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ರಾಜಕೀಯ ಗುರುಗಳನ್ನು ನಿಮ್ಮ ರೂಪದಲ್ಲಿಕಾಣುತ್ತಿದ್ದೇನೆ” ಎಂದು ಹಾಡಿ ಹೊಗಳಿದರು. ತಮ್ಮ ಭಾಷಣದ ಉದ್ದಕ್ಕೂ ‘ನಾನು 320 ದಿನಗಳ ಪ್ರಧಾನ ಮಂತ್ರಿ’ ಎಂಬುದನ್ನು ಒತ್ತಿ ಒತ್ತಿ ಹೇಳಿದರು.

ಅಷ್ಟೇ ಅಲ್ಲದೆ, “ಸಂತೋಷ್ ಅವರದ್ದು ನಿಸ್ವಾರ್ಥ ದೇಶ ಸೇವೆ. ಅವರಿಗೆ ಅಧಿಕಾರ ದಾಹ ಇಲ್ಲ. ಆ ದಾಹ ಅವರಲ್ಲೇನಾದರೂ ಇದ್ದಿದ್ದರೆ ಅವರು ಇಷ್ಟೊತ್ತಿಗೆ ರಾಜ್ಯದಲ್ಲೋ, ರಾಷ್ಟ್ರದಲ್ಲೊ ದೊಡ್ಡ ಅಧಿಕಾರ ಸ್ಥಾನದಲ್ಲಿರಬಹುದಿತ್ತು. ಆದರೆ, ಅವರು ಹಾಗೆ ಮಾಡಿಲ್ಲ. ಅಧಿಕಾರದ ವ್ಯಾಮೋಹವಿಲ್ಲದೆ ತೆರೆಮರೆಯಲ್ಲಿದ್ದುಕೊಂಡು ನಿರಂತರವಾಗಿ ಪಕ್ಷ ಕಟ್ಟುತ್ತಾ ಬಂದಿದ್ದಾರೆ’’ ಎಂದು ಹೊಗಳಿದರು.

ಅಂಬೇಡ್ಕರ್‌ ಆಶಯ ಈಡೇರಿಸಿದ್ದು ಕಾಂಗ್ರೆಸ್ಸೇತರ ಸರಕಾರಗಳು: ಸಂತೋಷ್

ತಮ್ಮ ಭಾಷಣದಲ್ಲಿ ಬಿ.ಎಲ್. ಸಂತೋಷ್ ಅವರು ಅಂಬೇಡ್ಕರ್ ಆಶಯಗಳು, ಸಂವಿಧಾನ ತಿದ್ದುಪಡಿ ಇತ್ಯಾದಿ ವಿಚಾರಗಳನ್ನು ಪ್ರಸ್ತಾಪಿಸಿದ್ದರು. “ತನ್ನ ಅಧಿಕಾರಾವಯಲ್ಲಿ ಸಂವಿಧಾನಕ್ಕೆ 75 ತಿದ್ದುಪಡಿ ಮಾಡಿದ್ದೇಕೆ ಮತ್ತು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ನೆಹರು ಸಂಪುಟದಿಂದ ರಾಜೀನಾಮೆ ನೀಡಲು ಕಾರಣಗಳೇನು ಎಂಬ ಕುರಿತು ಕಾಂಗ್ರೆಸ್‌ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಪ್ರಾಮಾಣಿಕವಾಗಿ ಚರ್ಚಿಸಿ’’ ಎಂದು ಅವರು ಸವಾಲು ಹಾಕಿದರು.

ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆ ವತಿಯಿಂದ ಬುಧವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸುಶಾಸನ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಲ್ವರಿಗೆ ಪ್ರಶಸ್ತಿ

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ನಿವೃತ್ತ ಐಎಎಸ್‌ ಅಕಾರಿ ಎಂ. ಮದನ್‌ ಗೋಪಾಲ್‌ ಮತ್ತು ವಿಶ್ರಾಂತ ಕುಲಪತಿ ಪ್ರೊ. ತಿಮ್ಮೇಗೌಡ ಅವರಿಗೆ ಅಟಲ್‌ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಫಲಕ, 10 ಗ್ರಾಂ ಚಿನ್ನದ ನಾಣ್ಯ ಮತ್ತು 1 ಲಕ್ಷ ರೂ.ನಗದು ಬಹುಮಾನ ಒಳಗೊಂಡಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments