ಆನೇಕಲ್ 16 : ಬೀದಿ ಬದಿ ಮತ್ತು ಬಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಆನೇಕಲ್ ಪೊಲೀಸರ ಸಹಯೋಗದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತು.
ಆನೇಕಲ್ನ ಸಂತೆ ಬೀದಿಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಚಾಲನೆಗೊಳಿಸಲಾಯಿತು. ಇತ್ತೀಚಿಗೆ ಬೇರೆಯವರ ಮಕ್ಕಳನ್ನು ಬಾಡಿಗೆಗೆ ತಂದು ಬಿಕ್ಷಾಟನೆ ಮಾಡುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಬೀದಿ ಬದಿ ಅಂಗಡಿ ಮಾಲಕರು, ಹಾಗು ಸಾರ್ವಜನಿಕರು ಈ ಕುರಿತಂತೆ ಕೂಡಲೇ ಮಾಹಿತಿ ನೀಡುವ ಮುಖಾಂತರ ಇಲಾಖೆಗೆ ಸಹಕರಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಇಲಾಖೆಯ ಸಂಪರ್ಕವಿರುವ ಕಾರ್ಡ್ ನೀಡಿದ್ದು ಮಾಹಿತಿ ನೀಡಲು ಕೋರಿದ್ದಾರೆ. ಆನೇಕಲ್ ಇನ್ಸ್ ಪೆಕ್ಟರ್ ಚಂದ್ರಪ್ಪ ಸಾರ್ವಜನಿಕರಗೆ ಜಾಗೃತಿ ನೀಡಿದರು.