Wednesday, January 28, 2026
24.9 C
Bengaluru
Google search engine
LIVE
ಮನೆವೈರಲ್ ನ್ಯೂಸ್ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ ಎಂದ ಜೊಮ್ಯಾಟೊ

ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ ಎಂದ ಜೊಮ್ಯಾಟೊ

ಬೆಂಗಳೂರು: ಈಗೆಲ್ಲಾ ಕೂತಲ್ಲೇ ಫುಡ್ ಆರ್ಡರ್  ಮಾಡಿ ತಿನ್ನುವ ಕಾಲ. ತಿನ್ನುವ ಆಹಾರದಿಂದ ಹಿಡಿದು ಮನೆಯ ದಿನಸಿ ಸಾಮಾನು, ತರಕಾರಿ ಎಲ್ಲವನ್ನು ಆನ್​ಲೈನ್​​ನಲ್ಲೇ ಆರ್ಡರ್​ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕಾಗಿ ಸಾಕಷ್ಟು ಆ್ಯಪ್​​ಗಳು ಕೂಡ ಇದೆ. ಸ್ವಿಗ್ಗಿ , ಜೊಮ್ಯಾಟೊ ಸೇರಿದಂತೆ ಅನೇಕ ಮೊಬೈಲ್​ ಫುಡ್ ಆ್ಯಪ್​​ಗಳನ್ನು ಕಾಣಬಹುದು. ಆದರೆ ಇದೀಗ ಜೊಮ್ಯಾಟೊ ಸೋಶಿಯಲ್​​ ಮೀಡಿಯಾಗಳಲ್ಲಿ ಹೊಸ ಪೋಸ್ಟ್​​ ಒಂದನ್ನು ಹಂಚಿಕೊಂಡಿದ್ದು, ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಫುಡ್ ಆ್ಯಪ್​​ ಜೊಮ್ಯಾಟೊ ತನ್ನ ಅಧಿಕೃತ ಟ್ವಿಟರ್​​​​​​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದೆ. ಇದರಲ್ಲಿ “ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ” ಎಂದು ಬರೆದುಕೊಂಡಿದೆ. ” ಅಗತ್ಯವಿದ್ದರೆ ಮಾತ್ರ ಮಧ್ಯಾಹ್ನದ ಸಮಯದಲ್ಲಿ ಆಹಾರವನ್ನು ಆರ್ಡರ್ ಮಾಡಿ, ಇಲ್ಲದಿದ್ದರೆ ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ” ಎಂದು ಬರೆದುಕೊಂಡಿದೆ.

https://twitter.com/zomato/status/1797179156528005204?ref_src=twsrc%5Etfw%7Ctwcamp%5Etweetembed%7Ctwterm%5E1797179156528005204%7Ctwgr%5E37d3ff9d6275345b13d2ee61239031ea7c70dea6%7Ctwcon%5Es1_&ref_url=https%3A%2F%2Ftv9kannada.com%2Ftrending%2Favoid-ordering-during-peak-afternoon-unless-absolutely-necessary-zomato-aks-845234.html

ದೇಶದ ಹೆಚ್ಚಿನ ಭಾಗಗಳಲ್ಲಿ ತೀವ್ರವಾದ ಶಾಖದ ಅಲೆ, ಕೆಲವೊಮ್ಮೆ ಗಾಳಿ ಮಳೆಗೆ ಆರ್ಡರ್ ಹೆಚ್ಚಾದಂತೆ ಡೆಲಿವರಿ ಬಾಯ್ಸ್​​ಗಳ ಕಾಳಜಿಯ ಮೇರೆಗೆ ಜೊಮ್ಯಾಟೊ ಭಾನುವಾರ ತನ್ನ ಗ್ರಾಹಕರನ್ನು ಈ ರೀತಿ ಒತ್ತಾಯಿಸಿದೆ. ಸದ್ಯ ಪೋಸ್ಟ್​ ಎಲ್ಲೆಡೆ ವೈರಲ್​​ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ” ನಾನು ನಿಮ್ಮ ಕಾಳಜಿಯನ್ನು ಶ್ಲಾಘಿಸುತ್ತೇನೆ, ಆದರೆ ಊಟದ ಸಮಯವನ್ನು ಹಸಿದುಕೊಂಡು ಮುಂದೂಡಲು ಸಾಧ್ಯವೇ?” ಎಂದು ಸಾಕಷ್ಟು ನೆಟ್ಟಿಗರು ಪೋಸ್ಟ್​​ಗೆ ಕಾಮೆಂಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments