ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿರುವ  ಬಾಹ್ಯಾಕಾಶ ಯಾತ್ರಿಗಳಾದ ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಭೂಮಿಗೆ ಮರಳುವುದು ಮತ್ತಷ್ಟು ವಿಳಂಬವಾಗಲಿದೆ. ಸುನಿತಾ ವಿಲಿಯಮ್ಸ್​ & ಬುಚ್​ ವಿಲ್ಮೋರ್ ಫೆಬ್ರವರಿಯಲ್ಲಿ ಹಿಂತಿರುಗುವುದಿಲ್ಲ ಅಂತ ನಾಸಾ ತಿಳಿಸಿದೆ.

ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್‌ಎಸ್) ಹಿಂದಿರುಗುವುದು ತಡವಾಗಲಿದೆ. ಅಲ್ಲಿ ಇಬ್ಬರು ಗಗನಯಾತ್ರಿಗಳು ಆರೋಗ್ಯವಾಗಿದ್ದಾರೆ ಅಂತ ನಾಸಾ ಮಾಹಿತಿ ನೀಡಿದೆ.

ಬೋಯಿಂಗ್ ಸಂಸ್ಥೆಯ ಸ್ಟಾರ್​​ಲೈನರ್​ ಗಗನನೌಕೆಯಲ್ಲಿ ಸುನಿತಾ, ಬುಚ್​ ಇಬ್ಬರೂ ಜೂನ್ 5ರಂದು ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದರು. ಅನಂತರ ಗಗನನೌಕೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಭೂಮಿಗೆ ಮರಳಲು ಸಾಧ್ಯವಾಗದೇ ಅಲ್ಲಿಯೇ ಸಿಲುಕಿದ್ದಾರೆ.

ಸುನಿತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್ ಇಬ್ಬರೂ ಜೂನ್ 5ರಂದು ಬಾಹ್ಯಾಕಾಶಕ್ಕೆ 7 ರಿಂದ 10 ದಿನಗಳ ಕಾರ್ಯಾಚರಣೆಗಾಗಿ ತೆರಳಿದ್ದರು. ಆದರೆ ನೌಕೆ ಬೋಯಿಂಗ್ ಸ್ಟಾರ್​ಲೈನರ್​ನಲ್ಲಿ ಸುರಕ್ಷತಾ ದೋಷಗಳಿಂದಾಗಿ ಅವರ ಆಗಮನವನ್ನು ಫೆಬ್ರವರಿಗೆ ವಿಸ್ತರಿಸಲಾಗಿತ್ತು. ಇದೀಗ ನಾಸಾ ಮತ್ತೆ ಹೊಸ ದಿನಾಂಕ ಘೋಷಿಸಿದ್ದು ಮಾರ್ಚ್​ ಅಥವಾ ಏಪ್ರಿಲ್ ಆರಂಭದಲ್ಲಿ ಹಿಂತಿರುಗುತ್ತಾರೆ ಅಂತ ಹೇಳಿದೆ.

Leave a Reply

Your email address will not be published. Required fields are marked *

Verified by MonsterInsights