ಬೆಂಗಳೂರು: ತಿಂದಂಗೂ ಅಲ್ಲ ಊಂಡಂಗೂ ಅಲ್ಲ ಪೊಲೀಸರಿಗೆ 3ಲಕ್ಷ ಫೈನ್ ಕಟ್ಟಿದ ಕಾಮನ್ ಮ್ಯಾನ್ಸ್. ಸಿಗ್ನಲ್ಲಿ 1 ನಿಮಿಷ ನಿಂತ್ಕೊಳ್ಳಿ ಅಂದ್ರೆ ನಮ್ ಜನಕ್ಕೆ ಅರ್ಜೆಂಟ್, ಟ್ರಾಫಿಕ್ ಪೊಲೀಸ್ ನಿಂತಿದ್ರು ಅವರ್ ಕಣ್ ತಪ್ಪಿಸಿ ರಾಕೇಟ್ ಸ್ಪೀಡ್ ನಲ್ಲಿ ಗಾಡಿ ಹೊಡ್ಕೊಂಡು ಹೋಗ್ತಾರೆ. ನೀವು ಟ್ರಾಫಿಕ್ ಪೊಲೀಸ್ ಕಣ್ ತಪ್ಪಿಸ ಬಹುದು ಆದ್ರೆ ಸಿಗ್ನಲ್ ಕ್ಯಾಮರಗಳ ಕಣ್ ತಪ್ಪಿಸೋಕೆ ಆಗುತ್ತಾ.. ಆಗಲ್ಲ.
ಹಿಂಗೆ ಪೊಲೀಸ್ ಕಣ್ ತಪ್ಪಿಸಿ ಸಿಗ್ನಲ್ ಜಪ್ ಮಾಡ್ತಿದ್ದವರನ್ನ ಹಿಡಿದು ಬೆಂಗಳೂರಿನ ಕಬ್ಬನ್ ಪಾರ್ಕ್ ಟ್ರಾಫಿಕ್ ಪೊಲೀಸ್ ಅಧಿಕಾರಿ ಎ ಎಸ್ ಐ ನಾಗೇಶ್ ಅವರು ಸಿಗ್ನಲ್ ಜಪ್ಪರ್ಸ್‌ಗಳಿಂದ ಬರೋಬರಿ ಮೂರುವರೆ ಲಕ್ಷ ದಂಡ ಕಟ್ಟಿಸಿಕೊಂಡಿದ್ದಾರೆ.
ಇದು ಟ್ರಾಫಿಕ್ ಪೊಲೀಸ್ ಇತಿಹಾಸದಲ್ಲೇ ಒಂದು ದೊಡ್ಡ ದಾಖಲೆ. ಒಂದೇ ದಿನ 3 ಲಕ್ಷದ 5 ಸಾವಿರ ಫೈನ್ ಕಲೆಕ್ಟ್ ಮಾಡಿರುವ ಘಟನೆ ನಡೆದಿರೋದು. ಬೆಂಗಳೂರಿನ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣಾ ಅಧಿಕಾರಿ ಎ ಎಸ್ ಐ ನಾಗೇಶ್ ಅವರಿಗೆ ಒಂದೇ ದಿನದಲ್ಲಿ ಲಕ್ಷ ಲಕ್ಷ ಪೈನ್ ಕಲೆಕ್ಟ್ ಮಾಡಿದ ಕೀರ್ತಿ ಸಲ್ಲುತ್ತದೆ, ಸರ್ಕಾರ ೫೦% ರಿಯಾಯಿತಿ ನೀಡಿರುವ ಹಿನ್ನೆಲೆ ಎಲ್ಲಾ ಸಂಚಾರ ಪೊಲೀಸ್ ಠಾಣೆಯಲ್ಲಿ ದಂಡ ವಸೂಲಿ ಮಾಡುವ ಕೆಲಸ ನೆಡಿಯುತಿದೆ
ಪೂಲೀಸರು 50% ಆಫರ್ ನಲ್ಲಿ ಅರ್ಧ ಫೈನ್ ಹಣವನ್ನ ಅಷ್ಟೇ ಕಟ್ಟಿಸಿಕೊಳ್ತಿದ್ದಾರೆ. ಇನ್ನೂ 100% ಅಂದ್ರೆ ಅವರೆಲ್ಲಾ 6 ಲಕ್ಷ ಫೈನ್ ಕಟ್ಟಬೇಕಿತ್ತು. ಆದ್ರೆ ಈ 50% ಆಫರ್ ನಿಂದ ಸಿಗ್ನಲ್ ಜಂಪರ್ಸ್ ಉಳ್ಕೊಂಡಿದ್ದಾರೆ. ನೋಡಿ ವೀಕ್ಷಕರೆ ನಾವ್ ಯಾಕ್ ನಿಮಗೆ ಈ ಸುದ್ದಿ ಹೇಳ್ತಿದ್ದೀವಿ ಅಂದ್ರೆ ನೀವು ಈ ರೀತಿ ಲಕ್ಷ ಲಕ್ಷ ಫೈನ್ ಕಟ್ಬಾರ್ದು ಅಂತ. ಟ್ರಫಿಕ್ ರೂಲ್ಸ್, ಸಿಗ್ನಲ್ಸ್ ಇರೋದು ನಮ್ಮ ಒಳ್ಳೆಯದಕ್ಕೆ ಟ್ರಾಫಿಕ್ನ ನಿಯಂತ್ರಣ ಮಾಡೋದಕ್ಕೆ. ಹಾಗಾಗಿ ಸರ್ವಜನಿಕರು ಪೂಲೀಸರಿಗೆ ಸಹಕರಿಸಿದ್ರೆ ದುಡ್ಡು ಉಳುಸ್ತೀರ ಜೊತೆಗೆ ನಿಮ್ಮ ಜೀವನೂ ಉಳಿತೆ.