ಲೈಫ್ ಸ್ಟೈಲ್ವೆಬ್ ಸ್ಟೋರೀಸ್ಸಿನಿಮಾ

ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ಹವಾ; ಯುವರಾಣಿಯಂತೆ ಕಂಗೊಳಿಸಿದ ‘ಚುಟುಚುಟು’ ಬೆಡಗಿ!

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಆಶಿಕಾ ರಂಗನಾಥ್ ಸಿನಿಮಾಗಳ ಚಿತ್ರೀಕರಣದ ನಡುವೆಯೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಅಭಿಮಾನಿಗಳಿಗಾಗಿ ಸದಾ ಹೊಸ ಹೊಸ ಫೋಟೋಶೂಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಹೊಸ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಇದರಲ್ಲಿ ಆಶಿಕಾ ಥೇಟ್ ಒಬ್ಬ ಯುವರಾಣಿಯಂತೆ ಕಂಗೊಳಿಸಿದ್ದಾರೆ.

ವಿಶೇಷವಾಗಿ ಈ ಬಾರಿ ಅವರು ‘ರೆಟ್ರೋ ಥೀಮ್’ ಮೊರೆ ಹೋಗಿದ್ದು, ಕೈಯಲ್ಲಿ ಗುಲಾಬಿ ಹಿಡಿದು ನೀಡಿರುವ ಭಂಗಿಗಳು ಮತ್ತು ಅವರ ಕ್ಲಾಸಿಕ್ ಗ್ಲಾಮ್ ಲುಕ್ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದೆ. ಫೋಟೋ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವೀವ್ಸ್ ಪಡೆದುಕೊಂಡಿದ್ದು, ಕಾಮೆಂಟ್ ಬಾಕ್ಸ್‌ನಲ್ಲಿ ಅಭಿಮಾನಿಗಳು ಅವರ ಸೌಂದರ್ಯಕ್ಕೆ ಮನಸೋತಿದ್ದಾರೆ.

ಕೇವಲ ಫೋಟೋಶೂಟ್ ಮಾತ್ರವಲ್ಲದೆ, ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರ ವಿವಾಹ ಪೂರ್ವ ಶಾಸ್ತ್ರಗಳು ಹಾಗೂ ದುಶ್ಯಂತ್ ಅವರ ಮದುವೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದ ಆಶಿಕಾ, ಸದ್ಯ ಕನ್ನಡದ ಜೊತೆಗೆ ಪರಭಾಷೆಯ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದು ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.

Comments (0)

Your email address will not be published. Required fields are marked *

Back to top button