ನವದೆಹಲಿ: ರಾಜಪಥದಲ್ಲಿ ನಡೆಯಲಿರುವ ಸಾಂಪ್ರದಾಯಿಕ ಗಣರಾಜ್ಯೋತ್ಸವದ  ಪರೇಡ್‌ನಲ್ಲಿ ದೆಹಲಿಯ ಟ್ಯಾಬ್ಲೋ  ಇರುವುದಿಲ್ಲ. ನಾಲ್ಕನೇ ಬಾರಿ ಈ ರೀತಿ ದೆಹಲಿಯ ಟ್ಯಾಬ್ಲೋ ತಿರಸ್ಕಾರಗೊಂಡಿದ್ದು, ಆಪ್‌  ಹಾಗೂ ಬಿಜೆಪಿ  ನಡುವೆ ಮತ್ತೆ ಸಂಘರ್ಷಕ್ಕೆ ಕಾರಣವಾಗಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌, ಕಳೆದ ಕೆಲವು ವರ್ಷಗಳಿಂದ ದೆಹಲಿಯ ಟ್ಯಾಬ್ಲೋಗೆ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಇದು ಯಾವ ರೀತಿಯ ರಾಜಕೀಯ? ಬಿಜೆಪಿಯವರು ದೆಹಲಿಯ ಜನರನ್ನು ಏಕೆ ದ್ವೇಷಿಸುತ್ತಾರೆ? ದೆಹಲಿಯ ಜನರು ಅವರಿಗೆ ಏಕೆ ಮತ ಹಾಕಬೇಕು? ಎಂದು ಕಿಡಿಕಾರಿದ್ದಾರೆ.

ಬಿಜೆಪಿಗೆ ದೆಹಲಿಯ ಜನರ ಬಗ್ಗೆ ಯಾವುದೇ ದೂರದೃಷ್ಟಿ ಇಲ್ಲ. ಅವರು ಸುಮ್ಮನೆ ಕೇಜ್ರಿವಾಲ್‌ರನ್ನು ನಿಂದಿಸುತ್ತಾರೆ. ಇದಕ್ಕಾಗಿ ನಾವು ಅವರಿಗೆ ಮತ ಹಾಕಬೇಕೇ? ಜನವರಿ 26 ರ ಪರೇಡ್‌ನಲ್ಲಿ ಭಾಗವಹಿಸದಂತೆ ಟ್ಯಾಬ್ಲೋ ಮತ್ತು ದೆಹಲಿಯ ಜನರನ್ನು ಏಕೆ ತಡೆಯಲಾಗುತ್ತಿದೆ? ಎಂದು ಅವರು ಪ್ರಶ್ನಸಿದ್ದಾರೆ.ದೆಹಲಿಯು ಭಾರತದ ರಾಜಧಾನಿಯಾಗಿದೆ ಮತ್ತು ಪ್ರತಿ ವರ್ಷ ಜನವರಿ 26 ರ ಮೆರವಣಿಗೆಯಲ್ಲಿ ನಮ್ಮ ಟ್ಯಾಬ್ಲೋ ಪ್ರತಿನಿಧಿಸಬೇಕು ಎಂದು ಅವರು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Verified by MonsterInsights