Top News

April 26: ಚುನಾವಣೆ ದಿನ ಇರಲ್ಲ ಮಳೆ.. ಮತದಾನಕ್ಕೆ ಸಜ್ಜಾಗಿ

ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಸದ್ಯ ರಾಜ್ಯದ ಎಲ್ಲೆಡೆ ವಿಸ್ತಾರವಾಗಿ ಮಳೆ ಆಗುತ್ತಿರುವ ಕಾರಣ ಚುನಾವಣೆ ದಿನವೂ ಮಳೆ ಬಿದ್ದರೇ ಏನು ಮಾಡೋದಪ್ಪ ಎಂಬ ಟೆನ್ಶನ್ ರಾಜಕಾರಣಗಳಲ್ಲಿದೆ. ಜೊತೆಗೆ ಮತದಾರರಲ್ಲೂ ಈ ಚಿಂತೆ ಇದೆ. ಆದರೆ, ನಿಮಗೆ ಆ ಟೆನ್ಶನ್ ಬೇಡ.. ಕಾರಣ ಏಪ್ರಿಲ್ 26ರಂದು ಹಳೆ ಮೈಸೂರು ಪ್ರಾಂತ್ಯದಲ್ಲಿ ಮಳೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

  • ಮೈಸೂರು – ಮಂಡ್ಯ-ಚಾಮರಾಜನಗರ-ತುಮಕೂರು ಜಿಲ್ಲೆಗಳಲ್ಲಿ ಏಪ್ರಿಲ್ 26ರಂದು ಗರಿಷ್ಠ ತಾಪಮಾನ 37-38 ಡಿಗ್ರಿ ಸೆಲ್ಶಿಯಸ್ ಇರುವ ಸಂಭವ ಇದೆ.
  • ಬೆಂಗಳೂರು-ಕೋಲಾರ-ಚಿಕ್ಕಬಳ್ಳಾಪುರ-ಹಾಸನ ಜಿಲ್ಲೆಗಳಲ್ಲಿ ಏಪ್ರಿಲ್ 26ರಂದು ಗರಿಷ್ಠ ತಾಪಮಾನ 36-37 ಡಿಗ್ರಿ ಸೆಲ್ಶಿಯಸ್ ಇರುವ ಸಂಭವ ಇದೆ.
  • ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಏಪ್ರಿಲ್ 26ರಂದು ಗರಿಷ್ಠ ತಾಪಮಾನ 32-33 ಡಿಗ್ರಿ ಸೆಲ್ಶಿಯಸ್ ಇರುವ ಸಂಭವ ಇದೆ.
  • ಕೊಡಗು-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಏಪ್ರಿಲ್ 26ರಂದು ಗರಿಷ್ಠ ತಾಪಮಾನ 34-35 ಡಿಗ್ರಿ ಸೆಲ್ಶಿಯಸ್ ಇರುವ ಸಂಭವ ಇದೆ.

ಆದರೆ, ಕೊಡಗು, ಹಾಸನ, ಚಿಕ್ಕಮಗಳೂರಿನ ಅಲ್ಲಲ್ಲಿ ಮಧ್ಯಾಹ್ನ ಅಥವಾ ಸಂಜೆ ನಂತರ ತುಂತುರು ಮಳೆಯಾಗಬಹುದು.. ಆಗದೆಯೂ ಇರಬಹುದು.. ಸೋ ಮತದಾನಕ್ಕೆ ಮಳೆ ಯಾವುದೇ ಅಡ್ಡಿ ಮಾಡುವ ಮುನ್ಸೂಚನೆ ಇಲ್ಲ. ಹೀಗಾಗಿ ಮತದಾರರು ಮಳೆ ಆತಂಕ ಇಲ್ಲದೇ ಮತದಾನದಲ್ಲಿ ಪಾಲ್ಗೊಳ್ಳಬಹುದು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಐದು ವರ್ಷಕೊಮ್ಮೆ ಬರುವ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದ್ದಾರೆ. ಚುನಾವಣೆ ದಿನ ಕೇವಲ ಐದು ನಿಮಿಷ ಮತದಾನಕ್ಕೆ ಮೀಸಲಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ

 

Comments (0)

Your email address will not be published. Required fields are marked *

Back to top button