Monday, December 8, 2025
17.4 C
Bengaluru
Google search engine
LIVE
ಮನೆಸಿನಿಮಾಯಾವುದಕ್ಕೂ ತಲೆ ಕೆಡಿಕೊಳ್ಳದ ಬಿಂದಾಸ್‌ ಬಾಯ್‌ ಅಪ್ಪು..!

ಯಾವುದಕ್ಕೂ ತಲೆ ಕೆಡಿಕೊಳ್ಳದ ಬಿಂದಾಸ್‌ ಬಾಯ್‌ ಅಪ್ಪು..!

​ಪುನೀತ್ ರಾಜ್​ಕುಮಾರ್ ಅವರೇ ಹೇಳಿದಂತೆ ವರ್ಷಕ್ಕೊಂದು ಚಿತ್ರದಲ್ಲಿ ನಟಿಸಿ ಕುಟುಂಬಕ್ಕೆ ಸಮಯ ಮೀಸಲಿಡುತ್ತಿದ್ದರು. ತಂದೆ ರಾಜ್‌ ಹಾಗೂ ಅಣ್ಣ ಶಿವಣ್ಣರಿಂದ ಭಿನ್ನ ರೀತಿಯಲ್ಲಿ ಸಿನಿ ರಸಿಕರನ್ನು ರಂಜಿಸಿದ ಅಪ್ಪು 2021ರಲ್ಲಿ ಹೃದಯಾಘಾತದಿಂದ ನಮ್ಮನ್ನು ಅಗಲಿರುವುದು ಬೇಸರದ ಸಂಗತಿಯಾಗಿದೆ ಹಾಗೂ ಇದು ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟವಾಗಿದೆ.

ಪುನೀತರ ಶೈಲಿಯೇ ಹಾಗೆ ಒಂದು ಸಿನಿಮಾ ಆದಮೇಲೆ ಮತ್ತೊಂದು ಸಿನಿಮಾ ಮಾಡಲು ಗ್ಯಾಪ್‌ ತೆಗೆದುಕೊಳ್ಳುತ್ತಿದ್ದರು. ಹಾಗೂ ಈ ಸಮಯದಲ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದರು.
ಅಣ್ಣ ಶಿವರಾಜಕುಮಾರ್‌ ಒಂದು ಸಿನಿಮಾ ಆದ ಮೇಲೆ ಗ್ಯಾಪ್‌ ತೆಗೆದುಕೊಳ್ಳುತ್ತಿರಲಿಲ್ಲ. ಒಂದೇ ದಿನ ಹಲವು ಸಿನಿಮಾ ಮಾಡಿರುವ ಉದಾಹರಣೆ ಇದೆ. ವರ್ಷಕ್ಕೆ 3 ಸಿನಿಮಾ ರೀಲಿಸ್‌ ಮಾಡಿರುವ ಶಿವಣ್ಣ ಅವರಿಂದ ಪುನೀತ್‌ ಸ್ವಲ್ಪ ಭಿನ್ನರಾಗಿದ್ದಾರೆ.

‘ಕಥೆ ಅಪ್ರೂವ್ ಆಗೋಕೆ ಟೈಮ್ ತೆಗೆದುಕೊಳ್ಳುತ್ತದೆ. ನಾನು ರಿಲ್ಯಾಕ್ಸ್ ಮನುಷ್ಯ. ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ಹೀಗಾಗಿ, ಹೆಚ್ಚು ಸಮಯ ಬೇಕು’ ಎಂದು ಪುನೀತ್ ಹೇಳಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು. ಪುನೀತ್‌ ರಾಜ್‌ಕುಮಾರ್‌ ಅಂದರೆ ಕನ್ನಡಿಗರ ಅವರು ಕೇವಲ ನಟನಲ್ಲ ನಮ್ಮಲ್ಲರಿಗೂ ಅವರು ಜೀವಂತ ಪ್ರೇರಣೆ ಆಗಿದ್ದರು.

2021ರ ಅಕ್ಟೋಬರ್ 29 ಕನ್ನಡ ಚಿತ್ರರಂಗಕ್ಕೆ ಶಾಶ್ವತ ಕಳೆ ತಂದ ದಿನ. ಹೃದಯಾಘಾತದಿಂದ ಅಪ್ಪು ನಮ್ಮ ಜೊತೆ ಇರಲಿಲ್ಲ. ಆದರೆ ಅವರ ನಗು, ಅವರ ವಿನಯ, ಅವರ ಕಾರ್ಯಪರತೆ, ಇವೆಲ್ಲವೂ ಇಂದು ಸಹ ಜೀವಂತ. ಪುನೀತ್ ರಾಜ್‌ಕುಮಾರ್ ನಮ್ಮ ಜೊತೆ ಇಲ್ಲದಿದ್ದರೂ, ಅವರ ಮಾತುಗಳು, ಅವರ ತತ್ವಗಳು ಅವರ ಜೀವನದ ನಿಲುವು “ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸರಳತೆ” — ಎಂದೆಂದಿಗೂ ನಮಗೆ ದಾರಿದೀಪವಾಗಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments