Tuesday, January 27, 2026
24.7 C
Bengaluru
Google search engine
LIVE
ಮನೆಜ್ಯೋತಿಷ್ಯಮನೆಗಳಲ್ಲಿ ಇರುವೆಗಳಿದ್ರೆ ಶುಭವೋ..? ಅಶುಭವೋ..?

ಮನೆಗಳಲ್ಲಿ ಇರುವೆಗಳಿದ್ರೆ ಶುಭವೋ..? ಅಶುಭವೋ..?

Dharma – Ant Story
ಮನೆಯೊಳಗೆ ಇರುವೆಗಳು ಬರುವುದು ಸಾಮಾನ್ಯ.. ಆದರೆ ಭಾರತೀಯ ಸಂಸ್ಕೃತಿ ಮತ್ತು ಜ್ಯೋತಿಷ್ಯದಲ್ಲಿ, ಅದರ ಹಿಂದೆ ಅನೇಕ ನಂಬಿಕೆಗಳಿವೆ. ಸಾಮಾನ್ಯವಾಗಿ ಮನೆಯಲ್ಲಿ ಇರುವೆಗಳು ಬರೋದು ಸಿಹಿತಿಂಡಿಗಳು ಬೀಳೋದ್ರಿಂದ ಮಾತ್ರ ಎಂದು ಎಂದುಕೊಳ್ತಾರೆ.. ಆದ್ರೆ ಪ್ರಾಚೀನ ಕಾಲದಿಂದ ಇದನ್ನ ಶುಭ ಸಂಕೇತವಾ ಅಶುಭ ಸಂಕೇತವ ಅನ್ನೋ ಚರ್ಚೆಗಳಿವೆ.. ವಿಶೇಷವಾಗಿ ಕಪ್ಪು ಮತ್ತು ಕೆಂಪು ಇರುವೆಗಳ ಬಗ್ಗೆ ಅನೇಕ ನಂಬಿಕೆಗಳಿವೆ, ಇದು ಮುಂಬರುವ ಸಮಯದ ಸೂಚನೆಗಳನ್ನು ನೀಡುತ್ತವೆ ಎಂದು ನಂಬಲಾಗಿದೆ

ಕಪ್ಪು ಇರುವೆಗಳನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಆಹಾರವಿಲ್ಲದೆ ನಿಮ್ಮ ಮನೆಯಲ್ಲಿ ಕಪ್ಪು ಇರುವೆಗಳು ಓಡಾಡುತ್ತಿರುವುದು ಕಂಡುಬಂದರೆ, ಲಕ್ಷ್ಮಿ ಮನೆಗೆ ಪ್ರವೇಶಿಸಲಿದ್ದಾಳೆ ಎಂದು ಸೂಚಿಸುತ್ತದಂತೆ.. ಅಂದ್ರೆ ಕಪ್ಪು ಇರುವೆಗಳು ಮನೆಗೆ ಬಂದ್ರೆ ನೀವು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತೀರಿ ಎಂದರ್ಥವಂತೆ.. ಕಪ್ಪು ಇರುವೆಗಳಿಗೆ ಹಿಟ್ಟು ಅಥವಾ ಸಿಹಿಯನ್ನು ನೀಡುವುದು ಶುಭ ಎಂದು ನಂಬಲಾಗಿದೆ..

ಅದೇ ರೀತಿ ಮನೆಗೆ ಕೆಂಪು ಇರುವೆಗಳು ಬಂದರೆ ಅದನ್ನ ಅಪಾಯದ ಸಂಕೇತ ಅಥವ ಅಶುಭ ಎಂದು ಪರಿಗಣಿಸಲಾಗಿದೆ.. ಮನೆಯಲ್ಲಿ ಕೆಂಪು ಇರುವೆಗಳು ವೇಗವಾಗಿ ಚಲಿಸುತ್ತಿದ್ರೆ ಅದನ್ನ ಜಗಳದ ಸಂಕೇತ, ಅನಾರೋಗ್ಯದ ಸಂಕೇತ ಎಂದು ನಂಬಲಾಗುತ್ತೆ.. ಹಾಗಂತ ನೀವು ಭಯ ಪಡಬೇಕಿಲ್ಲ.. ಬದಲಿಗೆ ಜಾಗರೂಕರಾಗಿರಬೇಕು ಅಷ್ಟೇ…

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಹೆಚ್ಚು ಇರುವೆಗಳು ಇದ್ರೆ ಅಲ್ಲಿ ಶಕ್ತಿ ಅಸಮತೋಲನದಲ್ಲಿದೆ ಎಂದರ್ಥ.. ಒಂದ್ವೇಳೆ ಮನೆ ಕ್ಲೀನ್ ಮಾಡ್ತಿದ್ರೂ ಪದೇ ಪದೇ ನಿಮ್ಮ ಮನೆಗೆ ಇರುವೆ ಬರ್ತಿದ್ರೆ, ನಿಮ್ಮ ಮನೆಯ ಪರಿಸರದ ಬಗ್ಗೆ ಗಮನ ಹರಿಸುವುದು ಮುಖ್ಯ
ಕೆಲವೊಮ್ಮೆ, ನಕಾರಾತ್ಮಕ ಶಕ್ತಿ ಅಥವಾ ವಾಸ್ತು ದೋಷಗಳಿಂದಾಗಿ, ಮನೆಯಲ್ಲಿ ಇರುವೆಗಳ ಬಾಧೆ ಕಂಡುಬರುತ್ತದೆ. ಆದ್ದರಿಂದ, ಮನೆಯನ್ನು ಸ್ವಚ್ಛಗೊಳಿಸುವುದರ ಜೊತೆಗೆ, ಉಪ್ಪು ಅಥವಾ ಕರ್ಪೂರವನ್ನು ಸುಡುತ್ತಿದ್ದರೆ ಇರುವೆ ಕಾಟ ತಡೆಯಬಹುದು
ಇನ್ನು ಕೆಲವರು ಕಪ್ಪು ಇರುವೆ ಬಂದರೆ ಅಥವಾ ಅವು ಸಾಕಷ್ಟು ಆಹಾರವನ್ನು ಸಂಗ್ರಹಿಸುತ್ತಿದ್ದರೆ, ಶೀಘ್ರದಲ್ಲೇ ಭಾರಿ ಮಳೆ ಬರಬಹುದು ಅಥವಾ ಹವಾಮಾನ ವೈಪರೀತ್ಯಗಳು ಸಂಭವಿಸಬಹುದು ಎಂದು ನಂಬಲಾಗುತ್ತೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments