ಬೆಂಗಳೂರು: ಟ್ರೂ ಆಲ್ಟ್ ಬಯೋಎನರ್ಜಿ ಕಂಪನಿಯು ತನ್ನ ಮುಕುಟಕ್ಕೆ ಮತ್ತೊಂದು ಗರಿಯನ್ನು ಪಡೆದುಕೊಳ್ಳುವುದರ ಮೂಲಕ ಕನ್ನಡಿಗರ ಘನತೆಯನ್ನು ವಿಶ್ವ ಮಟ್ಟದಲ್ಲಿ ಮತ್ತಷ್ಟು ಹೆಚ್ಚಿಸಿದೆ.
15ನೇ ಭಾರತ–ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನ ಮಂತ್ರಿ ಶ್ರೀ ಶಿಗೆರು ಇಶಿಬಾ ಅವರ ಸಮ್ಮುಖದಲ್ಲಿ, ಎಂ.ಆರ್.ಎನ್. ಸಮೂಹ ಸಂಸ್ಥೆಯ, ಟ್ರೂಆಲ್ಟ್ ಬಯೋಎನರ್ಜಿಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ವಿಜಯ್ ಎಂ. ನಿರಾಣಿ ಅವರು ಮತ್ತು ಜಪಾನ್‌ನ ಪ್ರಮುಖ ಹಾಗೂ ವ್ಯಾಪಾರ ಸಂಸ್ಥೆಯಾದ ಸುಮಿಟೋಮೊ ಕಾರ್ಪೊರೇಷನ್ ನಡುವೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಸಂಯುಕ್ತ ಒಡಂಬಡಿಕೆಯಲ್ಲಿ ಬಯೋಗ್ಯಾಸ್ ಹಾಗೂ ಸಸ್ಟೇನಬಲ್ ಏವಿಯೇಷನ್ ಫ್ಯುಯೆಲ್ (SAF) ಘಟಕಗಳನ್ನು ಸ್ಥಾಪಿಸುವ ಕುರಿತು ಮಹತ್ವದ ಸಹಿ ಹಾಕಲಾಗಿದ್ದು, ಇದು ಶುದ್ಧ ಇಂಧನ, ಸುಸ್ಥಿರತೆ ಹಾಗೂ ಹಸಿರು ಭವಿಷ್ಯದತ್ತ ಎರಡೂ ರಾಷ್ಟ್ರಗಳ ಬದ್ಧತೆ ಮತ್ತು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವ ಮಹತ್ವದ ಉದ್ದೇಶ ಹೊಂದಿದೆ.
ಸಮಾಜಮುಖಿ ಕೆಲಸಗಳನ್ನು ಹಂತ – ಹಂತವಾಗಿ ಮಾಡುತ್ತಿರುವ ನಿರಾಣಿ ಪರಿವಾರದ ಸಾಧನೆ, ಯಶಸ್ಸು, ಕೀರ್ತಿ ದೇಶ ವಿದೇಶಗಳಲ್ಲಿ ನಿರಂತರವಾಗಿ ಹೀಗೆ ಪಸರಿಸುತ್ತಲೇ ಇರಲಿ ಎಂದು ಆಶಿಸೋಣ.