ಆನೇಕಲ್ : ದ್ವಿಚಕ್ರದಲ್ಲಿ ರೈಲ್ವೇ ಸೇತುವೆ ಕೆಳಗಡೆ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಆನೇಕಲ್ ಪಟ್ಟಣದ ಪಂಪ್ಹೌಸ್ ವಾಸಿ 23 ವರ್ಷದ ಪೃಥ್ವಿ ಬಂಧಿತ ಆರೋಪಿಯಾಗಿದ್ದಾನೆ. ಚಂದಾಪುರ ಮುಖ್ಯರಸ್ತೆಯ ಕರ್ಪೂರು ಗೇಟ್- ಅರವಂಟಿಗೆಪುರ ರೈಲ್ವೆ ಸೇತುವೆ ಬಳಿ ದ್ವಿಚಕ್ರವಾಹನದಲ್ಲಿ ಗಾಂಜಾ ಪೊಟ್ಟಣಗಳನ್ನ ಮಾರಾಟ ಮಾಡುತ್ತಿದ್ದ ಹತ್ತಿರದಲ್ಲಿಯೇ ಅಲಯನ್ಸ್ ಕಾಲೇಜು ಇದ್ದು ಮಾರಾಟ ಜೋರಾಗಿ ನಡೆಯುತಿತ್ತು ಎಂದೆನ್ನಲಾಗಿದೆ. ಹದಿನೈದು ಸಾವಿರಕ್ಕೂ ಹೆಚ್ಚು ಬೆಲೆಯ 540 ಗ್ರಾಂ ಗಾಂಜಾವನ್ನು ಪೃಥ್ವಿ ಮಾರಾಟಕ್ಕೆ ಸಜ್ಜಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆನೇಕಲ್ ಇನ್ಸ್ಪೆಕ್ಟರ್ ಚಂದ್ರಪ್ಪ, ಎಸ್ಐ ಪ್ರದೀಪ್, ಎಎಸ್ಐ ರಾಜು, ಸಿಬ್ಬಂದಿ ಸುರೇಶ್ ಮತ್ತು ಶಂಕರ್ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೊಪ್ಪಿಸಿದ್ದಾರೆ.
ಎರಡನೇ ಬಾರಿ ಆರೋಪಿಯಾಗಿ ಜೈಲು ಶಿಕ್ಷೆ ಅನುಭವಿಸಿ ಬಂದು ಮತ್ತೆ ಇದೇ ಕೆಲಸದಲ್ಲಿ ನಿರತನಾಗಿದ್ದ. ಆನೇಕಲ್ ಪೊಲೀಸ್ ಠಾಣಾ ಪರಿಧಿಯಲ್ಲೇ ಕೆಜಿ ಗಟ್ಟಲೆ ಗಾಂಜಾದೊಂದಿಗೆ ಸಿಲುಕಿ ಜೈಲೂಟ ಅನುಭವಿಸಿದ್ದ.