Thursday, August 21, 2025
25.7 C
Bengaluru
Google search engine
LIVE
ಮನೆ#Exclusive NewsTop Newsವಕ್ಫ್​ ಬೋರ್ಡ ಅನ್ನೇ ವಜಾಗೊಳಿಸಿದ ಆಂಧ್ರ ಪ್ರದೇಶ ಸರ್ಕಾರ

ವಕ್ಫ್​ ಬೋರ್ಡ ಅನ್ನೇ ವಜಾಗೊಳಿಸಿದ ಆಂಧ್ರ ಪ್ರದೇಶ ಸರ್ಕಾರ

ದೇಶಾದ್ಯಂತ ವಕ್ಫ್ ಮಸೂದೆ ಮತ್ತು ಕರ್ನಾಟಕದಲ್ಲಿ ವಕ್ಫ್ ವಿವಾದಗಳ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಆಂಧ್ರ ಪ್ರದೇಶ ಸರ್ಕಾರ ವಕ್ಫ್ ಮಂಡಳಿಯನ್ನೇ ವಜಾಗೊಳಿಸಿ ಎಂದು  ಆದೇಶ ಹೊರಡಿಸಿದೆ.

ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಸರ್ಕಾರ ರಚಿಸಿದ್ದ ವಕ್ಫ್ ಬೋರ್ಡ್ ಅನ್ನು ಆಂಧ್ರ ಪ್ರದೇಶ ಸರ್ಕಾರ ವಿಸರ್ಜಿಸಿದೆ.

 

ಹಿಂದಿನ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೊರಡಿಸಿದ್ದ ಜಿಒ-47 ರದ್ದುಗೊಳಿಸಿ ಹಾಲಿ ಸರ್ಕಾರ ಹೊಸ ಜಿಒ-75 ಹೊರಡಿಸಿದೆ. ಕಳೆದ ವರ್ಷ ಅಕ್ಟೋಬರ್ 21 ರಂದು ಹಿಂದಿನ ಸರ್ಕಾರವು ಮಂಡಳಿಯ ಸದಸ್ಯರ ನಾಮನಿರ್ದೇಶನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ನಂತರ ವಕ್ಫ್ ಮಂಡಳಿಯ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಹೈಕೋರ್ಟ್ ಮಧ್ಯಂತರ ಆದೇಶಗಳನ್ನು ನೀಡಿದೆ ಎಂದು ಸಚಿವ ಎನ್.ಎಂ.ಡಿ.ಫಾರೂಕ್ ಸ್ಪಷ್ಟಪಡಿಸಿದರು.ರಾಜ್ಯದಲ್ಲಿ ವಕ್ಫ್ ಬೋರ್ಡ್ ಆಸ್ತಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ಸದ್ಯದಲ್ಲೇ ನೂತನ ವಕ್ಫ್ ಬೋರ್ಡ್ ನೇಮಕಕ್ಕೆ ಕಸರತ್ತು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.  ಜಗನ್ ಸರ್ಕಾರವು ವಕ್ಫ್ ಬೋರ್ಡ್ ಅನ್ನು ಸ್ಥಾಪಿಸುವಾಗ ಜೆವಿ 47 ಅನ್ನು ಹೊರಡಿಸಿತು . ಆದರೆ, ಆಸ್ತಿಯಲ್ಲಿ ಅವ್ಯವಹಾರ ನಡೆದಿರುವುದನ್ನು ಕಂಡು ವಕ್ಫ್ ಮಂಡಳಿ ಬಿಲ್ ರದ್ದುಗೊಳಿಸಿತ್ತು.

ಹೊಸ ಆದೇಶ, GO-75, ವಕ್ಫ್ ಮಂಡಳಿಯಲ್ಲಿನ ಆಡಳಿತ ನಿರ್ವಾತವನ್ನು ಪರಿಹರಿಸುವ ಉದ್ದೇಶವನ್ನು ಹೊಂದಿದೆ. ವಕ್ಫ್ ಆಸ್ತಿಗಳನ್ನು ರಕ್ಷಿಸಲು ಮತ್ತು ಅದರ ಹೊಸ ನಿರ್ದೇಶನಗಳ ಅಡಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣವನ್ನು ಉತ್ತೇಜಿಸಲು ಸರ್ಕಾರವು ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು.

ವಕ್ಫ್ ಬೋರ್ಡ್ ಜಮೀನುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್ತಿನ ಮುಂದೆ ತಿದ್ದುಪಡಿ ಮಸೂದೆಯನ್ನು ತಂದಿದೆ. ಸಮ್ಮಿಶ್ರ ಪಕ್ಷಗಳು ಈ ಮಸೂದೆಯನ್ನು ಬೆಂಬಲಿಸಿದರೆ ವಿರೋಧ ಪಕ್ಷಗಳು ಇದನ್ನು ವಿರೋಧಿಸಿದವು.

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments