ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಅರಣ್ಯ ಹಾಗೂ ಪರಿಸರ ಸಚಿವ ಪವನ್ ಕಲ್ಯಾಣ್ ವಿಶಾಖಪಟ್ಟಣದಲ್ಲಿ ವನ್ಯಜೀವಿ ಸಂರಕ್ಷಣೆಯ ಬಗ್ಗೆ ತಮ್ಮ ಅಪಾರ ಉತ್ಸಾಹವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ . ಅವರ ತಾಯಿ ಅಂಜನಾ ದೇವಿ ಜನ್ಮದಿನದ ಪ್ರಯುಕ್ತ ಪವನ್ ಕಲ್ಯಾಣ್ ಇಂದಿರಾ ಗಾಂಧಿ ಪ್ರಾಣಿ ಸಂಗ್ರಹಾಲಯದಿಂದ ಎರಡು ಜಿರಾಫೆಗಳನ್ನು ದತ್ತು ಪಡೆದಿದ್ದಾರೆ. ಮುಂದಿನ ಒಂದು ವರ್ಷದ ಕಾಲ ಅವುಗಳ ಆರೈಕೆ, ಆಹಾರ ಮತ್ತು ವೈದ್ಯಕೀಯ ವೆಚ್ಚಗಳನ್ನು ಅವರು ತಮ್ಮ ಖರ್ಚಿನಿಂದ ಭರಿಸುವುದಾಗಿ ತಿಳಿಸಿದ್ದಾರೆ.
ಪವನ್ ಕಲ್ಯಾಣ್ ಮೃಗಾಲಯ ಉದ್ಯಾನವನಕ್ಕೆ ಭೇಟಿ ನೀಡಿ, ಸುಮಾರು 650 ಎಕರೆ ವ್ಯಾಪ್ತಿಯ ವನ್ಯಜೀವಿ ಅಭಯಾರಣ್ಯವನ್ನು ಸಂಪೂರ್ಣವಾಗಿ ಪರಿಶೀಲಿಸಿದರು. ಅವರು ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ಹಾಗೂ ವನ್ಯಜೀವಿ ರಕ್ಷಕರೊಂದಿಗೆ ಸಂವಾದ ನಡೆಸಿ, ಅಭಯಾರಣ್ಯದ ನಿರ್ವಹಣೆ ಮತ್ತು ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಂಡರು.
ರಾಜಕಾರಣಿಯೊಬ್ಬರೂ ತಮ್ಮ ಅಧಿಕಾರದೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನೂ ಪ್ರದರ್ಶಿಸಿದ್ದು , ವನ್ಯಜೀವಿ ಪ್ರಿಯರು ಹಾಗು ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .


