‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ 3 ವರ್ಷಗಳಾಗುತ್ತಿವೆ. ಆದರೆ ಇನ್ನೂ ಕೂಡ ಅವರ ಅಗಲಿಕೆಯ ನೋವು ಕಡಿಮೆ ಆಗಿಲ್ಲ. ಈಗಲೂ ‘ಅಪ್ಪು’ ಎಂಬ ಹೆಸರು ಕಿವಿ ಮೇಲೆ ಬಿದ್ದಾಗ ಫ್ಯಾನ್ಸ್ ಕಣ್ಣು ಒದ್ದೆಯಾಗುತ್ತದೆ. ಅಷ್ಟೊಂದು ತೀವ್ರವಾಗಿ ಕಾಡುತ್ತಿದೆ ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆ. ಈಗ ಅಪ್ಪು ಬಗ್ಗೆ ಮಾತನಾಡುವುದಕ್ಕೆ ಕಾರಣ, ಜೀ ಕನ್ನಡ ವಾಹಿನಿಯ ಒಂದು ರಿಯಾಲಿಟಿ ಶೋ.
ಹೌದು, ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್’ ರಿಯಾಲಿಟಿ ಶೋನಲ್ಲಿ ಈಚೆಗೆ ಒಂದು ಸ್ಕಿಟ್ ಮಾಡಲಾಗಿತ್ತು. ಅದು ಟೈಮ್ ಟ್ರಾವೆಲ್ ಮೆಷಿನ್ ಕುರಿತಾದ ಕಾನ್ಸೆಪ್ಟ್‌ನಿಂದ ರಚಿತಗೊಂಡಿತ್ತು. ಆ ಟೈಮ್ ಮೆಷಿನ್‌ನಿಂದ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿ ಮಾಡುವಂತಿದ್ದರೆ ಹೇಗಿರುತ್ತದೆ ಎಂಬುದನ್ನು ತೋರಿಸಲಾಯಿತು. ಅದರಲ್ಲಿ ಅಪ್ಪು ಆಗಿ ಜೂನಿಯರ್ ಪುನೀತ್ ರಾಜ್‌ಕುಮಾರ್ ಬಂದಿದ್ದರು. ವೇದಿಕೆ ಮೇಲೆ ಜೂನಿಯರ್ ಪುನೀತ್ ಇದ್ದರೂ ಕೂಡ ಅಲ್ಲಿದ್ದವರ ಎಮೋಷನ್ಸ್ ಮಾತ್ರ ನಿಜವಾಗಿಯೇ ಇತ್ತು.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com