ದೇಶ/ವಿದೇಶ

ಪಾಕಿಸ್ತಾನಕ್ಕೆ ಕೈ ಕೊಟ್ಟ ಅಮೆರಿಕ

ಭಾರತದ ವಿರುದ್ಧ ಯುದ್ಧ ಸಾರಿರುವ ಪಾಕಿಸ್ತಾನಕ್ಕೆ ಅಮೆರಿಕ ಕೂಡ ದೊಡ್ಡ ಆಘಾತ ನೀಡಿದೆ. ಅಮೆರಿಕ ಸಪೋರ್ಟ್ ಮಾಡುತ್ತೆ ಅನ್ನೋ ಧೈರ್ಯದಿಂದಲೇ ಪಾಕಿಸ್ತಾನ ಇಷ್ಟು ನಿಗರಾಡಿ ಭಾರತದ ಮೇಲೆ ದಾಳಿ ನಡೆಸ್ತಿತ್ತು.. ಈಗ ಅಮೆರಿಕ ಕೂಡ ಪಾಕಿಸ್ತಾನಕ್ಕೆ ಕೈ ಕೊಟ್ಟಿದೆ. ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೆ ಪಾಕಿಸ್ತಾನವೇ ಕಾರಣ ಅಂತ ಅಮೆರಿಕ ನೇರವಾಗಿ ಹೇಳಿಬಿಟ್ಟಿದೆ.

ಪಾಕಿಸ್ತಾನ ಮಾಡ್ತಿರುವ ಭಯೋತ್ಪಾದನೆಯಿಂದ ಇಷ್ಟೆಲ್ಲಾ ಅನಾಹುತ ಆಗಿದೆ. ಈ ಯುದ್ಧಕ್ಕೆ ಪಾಕ್ ಹೊಣೆ ಎಂದು ಅಮೆರಿಕ ಬಹಿರಂಗವಾಗಿ ಹೇಳಿದೆ ಅಲ್ಲದೇ ಪರೋಕ್ಷವಾಗಿ ಭಾರತಕ್ಕೆ ಡೊನಾಲ್ಡ್ ಟ್ರಂಪ್ ಬೆಂಬಲ ನೀಡಿದ್ದಾರೆ.

ಮತ್ತೊಂದು ಕಡೆ ವಿಶ್ವಸಂಸ್ಥೆ ಕೂಡ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದೆ. ಪಾಕ್ ಉದ್ಧಟತನವನ್ನ ವಿಶ್ವಸಂಸ್ಥೆ ಖಂಡಿಸಿದ್ದು, ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರುವು ಅಕ್ಷಮ್ಯ ಅಪರಾಧ, ಪ್ರಜೆಗಳನ್ನ ಟಾರ್ಗೆಟ್ ಮಾಡಿರುವುದು ಗಂಭೀರ ವಿಚಾರ ಎಂದಿದೆ. ಅಲ್ಲದೆ ಭಾರತ ಮತ್ತು ಪಾಕಿಸ್ತಾನ ನಡುವೆ ಕೂಡಲೇ ಶಾಂತಿ ಸ್ಥಾಪನೆ ಆಗಬೇಕು ಎಂದೂ ವಿಶ್ವಸಂಸ್ಥೆ ಎರಡೂ ದೇಶಗಳಿಗೆ ಕರೆ ಕೊಟ್ಟಿದೆ.

Comments (0)

Your email address will not be published. Required fields are marked *

Back to top button