Top Newsಹಣಕಾಸು

500 ಕೋಟಿ ಹಾಕಿ 9500 ಕೋಟಿ ಬಾಚಿದ ಅಂಬಾನಿ..! ಪೇಂಟ್ ಮಾಯೆ..!

ಭಾರತದ ಅತಿದೊಡ್ಡ ಉದ್ಯಮ ಸಾಮ್ರಾಜ್ಯದ ಅಧಿಪತಿ ಮುಕೇಶ್ ಅಂಬಾನಿ ಅಂದ್ರೆ ದುಡ್ಡು ಮಾಡೋದ್ರಲ್ಲಿ ಎಕ್ಸ್​​ಪರ್ಟ್… 10 ರೂಪಾಯಿ ಹಾಕಿ 10 ಲಕ್ಷ ಲಾಭ ತೆಗೆಯೋ ಚಾಣಾಕ್ಷ ಉದ್ಯಮಿ.. ಈಗ ಅವ್ರು 500 ಕೋಟಿ ರೂಪಾಯಿ ಹಾಕಿ 9500 ಕೋಟಿ ರೂಪಾಯಿ ಲಾಭ ತೆಗೆದಿದ್ದಾರೆ.. ಈಗ ಅವರು ಏಷ್ಯನ್ ಪೇಂಟ್ಸ್ ಕಂಪನಿಯಲ್ಲಿನ ತಮ್ಮೆಲ್ಲಾ ಷೇರುಗಳನ್ನು ಮಾರಿದ್ದಾರೆ. ಇದರಿಂದ ಅವರು 9,580 ಕೋಟಿ ರೂ ಗಳಿಸಿದ್ದಾರೆ.

ಮುಕೇಶ್ ಅಂಬಾನಿ ಮಾಲೀಕತ್ವದ ಸಿದ್ಧಾಂತ್ ಕಮರ್ಷಿಯಲ್ಸ್ ಸಂಸ್ಥೆ 500 ಕೋಟಿ ಹಾಕಿ ಬರೋಬ್ಬರಿ 9500 ಕೋಟಿ ಲಾಭ ತೆಗೆದಿದೆ.. ಮುಕೇಶ್ ಅಂಬಾನಿ ಅವ್ರು 17 ವರ್ಷದ ಹಿಂದೆ 2008ರಲ್ಲಿ ಏಷ್ಯನ್ ಪೇಂಟ್ಸ್​​ನಲ್ಲಿ 500 ಕೋಟಿ ರೂಪಾಯಿಗೆ 4.9ರಷ್ಟು ಷೇರುಗಳನ್ನ ಖರೀದಿಸಿದತ್ತು.. 17ವರ್ಷದ ಬಳಿಕ ಈಗ ಇದರ ಮೌಲ್ಯ ಬರೋಬ್ಬರಿ 9580 ಕೋಟಿಗೆ ಏರಿಕೆ ಆಗಿದೆ.. ಈಗ ಏಷ್ಯನ್ ಪೇಂಟ್ಸ್​​ನಲ್ಲಿದ್ದ ತನ್ನ ಷೇರುಗಳನ್ನ ಮಾರಿ ಒಟ್ಟು 9580 ಕೋಟಿ ಆದಾಯ ಗಳಿಸಿದೆ. ಈ 17 ವರ್ಷದಲ್ಲಿ ಅವರಿಗೆ ಸಿಕ್ಕ ಲಾಭ 9,080 ಕೋಟಿ ರೂ. ಒಟ್ಟಾರೆ ಶೇ. 2,200ರಷ್ಟು ರಿಟರ್ನ್ ಗಿಟ್ಟಿಸಿದ್ದಾರೆ.

ರಿಲಾಯನ್ಸ್ ಇಂಡಸ್ಟ್ರೀಸ್​​ನ ಅಂಗಸಂಸ್ಥೆಯಾದ ಸಿದ್ಧಾಂತ್ ಕಮರ್ಷಿಯಲ್ಸ್ (Siddhant Commericals) ಏಷ್ಯನ್ ಪೇಂಟ್ಸ್​​ನ 4.37 ಕೋಟಿ ಈಕ್ವಿಟಿ ಷೇರುಗಳನ್ನು ಹೊಂದಿತ್ತು. ಕಳೆದ ವಾರ ಬ್ಲಾಕ್ ಡೀಲ್​​ನಲ್ಲಿ 3.50 ಕೋಟಿ ಷೇರುಗಳನ್ನು ಎಸ್​​ಬಿಐ ಮ್ಯೂಚುವಲ್ ಫಂಡ್​​ಗೆ ಮಾರಿತ್ತು. ಪ್ರತೀ ಷೇರಿಗೆ 2,201 ರೂ ಬೆಲೆಗೆ ಅದು ಮಾರಿತು.

ಈಗ ಉಳಿದ 87 ಲಕ್ಷ ಷೇರುಗಳನ್ನು ಪ್ರತೀ ಷೇರಿಗೆ 2,207 ರೂನಂತೆ ಐಸಿಐಸಿಐ ಲೈಫ್ ಮ್ಯೂಚುವಲ್ ಫಂಡ್​​ಗೆ ಮಾರಿದೆ. ಇವೆರಡು ಬ್ಲಾಕ್ ಡೀಲ್​ಗಳಿಂದ ಸಿದ್ಧಾಂತ್ ಕಮರ್ಷಿಯಲ್ಸ್ ಗಳಿಸಿದ ಆದಾಯ 9,580 ಕೋಟಿ ರೂ.

Comments (0)

Your email address will not be published. Required fields are marked *

Back to top button