ದೆಹಲಿ: ಅಮರನಾಥ ಯಾತ್ರೆ ಜೂನ್ 29 ರಿಂದ ಆರಂಭವಾಗಿ ಆಗಸ್ಟ್ 19 ರಂದು ಕೊನೆಗೊಳ್ಳಲಿದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಭಾನುವಾರ ತಿಳಿಸಿದೆ.
ಅಮರನಾಥ ದೇವಾಲಯವು ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿ ನೆಲೆಗೊಂಡಿದ್ದು, ಸುಮಾರು 3,880 ಮೀಟರ್ ಎತ್ತರವಿದೆ. ವಾರ್ಷಿಕ ಯಾತ್ರೆಯು ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್ ಮತ್ತು ಗಾಂದರ್‌ಬಲ್ ಜಿಲ್ಲೆಯ ಬಾಲ್‌ಟಾಲ್ ಮಾರ್ಗಗಳಿಂದ ಪ್ರಾರಂಭಗೊಳ್ಳಲಿದೆ.