ಪುಷ್ಪ 2 ಕ್ರೇಜ್ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪುಷ್ಪ ಟ್ರೇಲರ್ ಸಖತ್ ಸದ್ದು ಮಾಡ್ತಿದೆ. ಅಲ್ಲು ಅರ್ಜುನ್ ಅಬ್ಬರವನ್ನು ಥಿಯೇಟರ್ನಲ್ಲಿ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್, ಫಹದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪ 2 ಸಿನಿಮಾ ತೆರೆ ಮೇಲೆ ಸಖತ್ ಸೌಂಡ್ ಮಾಡೋದು ಪಕ್ಕಾ ಎನ್ನಲಾಗ್ತಿದೆ. ರಿಲೀಸ್ಗೆ ಕೌಂಟ್ ಡೌನ್ ಶುರುವಾಗಿದೆ. ಇದರ ನಡುವೆ ಅಲ್ಲು ಅರ್ಜುನ್, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ಗೆ ಥ್ಯಾಂಕ್ಸ್ ಹೇಳಿದ್ದಾರೆ. ಕಾರಣ ಕೂಡ ಇದೆ.
ಕರ್ನಾಟಕದಲ್ಲಿ ಟಿಕೆಟ್ ದರವನ್ನು ಬೇಕಾಬಿಟ್ಟಿ ಹೆಚ್ಚಿಸಲಾಗುತ್ತದೆ. ಆದರೆ, ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡು ಭಾಗದಲ್ಲಿ ಆ ರೀತಿ ಇಲ್ಲ. ಅಲ್ಲಿ ಸರ್ಕಾರ ಒಪ್ಪಿಗೆ ಕೊಟ್ಟರೆ ಮಾತ್ರ ಸಿನಿಮಾ ಟಿಕೆಟ್ ಬೆಲೆ ಹೆಚ್ಚಿಸಬಹುದು. ಅದೂ ಸರ್ಕಾರ ನಿಗದಿ ಮಾಡಿದ ಮಿತಿಯಲ್ಲೇ ಇರಬೇಕು. ಈಗ ಆಂಧ್ರ ಪ್ರದೇಶದಲ್ಲಿ ‘ಪುಷ್ಪ 2’ ಚಿತ್ರಕ್ಕೆ ಟಿಕೆಟ್ ಬೆಲೆ ಹೆಚ್ಚಿಸಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಪವನ್ ಕಲ್ಯಾಣ್ ಅವರು ಚಿತ್ರರಂಗದವರು. ಅವರಿಗೆ ಚಿತ್ರರಂಗದಲ್ಲಾಗುವ ಬೆಳವಣಿಗೆಗಳ ಬಗ್ಗೆ ಅರಿವಿದೆ. ಯಾವ ಕ್ರಮ ಸಿನಿಮಾ ರಂಗಕ್ಕೆ ಸಹಕಾರಿ ಆಗುತ್ತದೆ ಎನ್ನುವುದು ತಿಳಿದಿದೆ. ‘ಪುಷ್ಪ 2’ ಬಿಗ್ ಬಜೆಟ್ ಸಿನಿಮಾ. ನಿರ್ಮಾಪಕರು ಲಾಭ ಕಾಣಬೇಕು ಎಂದರೆ ಸಿನಿಮಾ ಹೆಚ್ಚಿನ ಕಲೆಕ್ಷನ್ ಮಾಡಬೇಕು. ಹೀಗಾಗಿ, ಟಿಕೆಟ್ ದರ ಹೆಚ್ಚಿಸಲು ಅವರ ಸರ್ಕಾರ ಅವಕಾಶ ನೀಡಿದೆ. ಅಲ್ಲು ಅರ್ಜುನ್ ಹಾಗೂ ಪವನ್ ಕಲ್ಯಾಣ್ ಮಧ್ಯೆ ಮುನಿಸಿದೆ. ಇದನ್ನು ಮರೆತು ಇವರು ಚಿತ್ರಕ್ಕಾಗಿ ಪರಸ್ಪರ ಬೆಂಬಲಕ್ಕೆ ನಿಂತಿದ್ದಾರೆ.
I extend my heartfelt thanks to the Government of Andhra Pradesh for approving the ticket hike. This progressive decision demonstrates your steadfast commitment to the growth and prosperity of the Telugu film industry.
A special note of thanks to the Hon’ble @AndhraPradeshCM,…
— Allu Arjun (@alluarjun) December 2, 2024
ಈ ಬಗ್ಗೆ ಟ್ವೀಟ್ ಮಾಡಿರೋ ಅಲ್ಲು ಅರ್ಜುನ್, ‘ಟಿಕೆಟ್ ಬೆಲೆ ಹೆಚ್ಚಿಸಲು ಅವಕಾಶ ನೀಡಿದ ಆಂಧ್ರ ಸರ್ಕಾರಕ್ಕೆ ಧನ್ಯವಾದ. ಈ ಪ್ರಗತಿಪರ ನಿರ್ಧಾರವು ತೆಲುಗು ಚಿತ್ರರಂಗದ ಬೆಳವಣಿಗೆ ಮತ್ತು ಏಳಿಗೆಗೆ ನೀವು ತೋರುತ್ತಿರುವ ಬದ್ಧತೆಯನ್ನು ತೋರಿಸುತ್ತದೆ’ ಎಂದಿದ್ದಾರೆ ಅಲ್ಲು ಅರ್ಜುನ್.
‘ಚಿತ್ರರಂಗದ ಕಲ್ಯಾಣಕ್ಕೆ ಸಹಕರಿಸಿದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಧನ್ಯವಾದ’ ಎಂದು ಅವರು ಬರೆದುಕೊಂಡಿದ್ದಾರೆ. ಸದ್ಯ ಈ ಟ್ವೀಟ್ ವೈರಲ್ ಆಗಿದೆ.
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾಗೆ ಸುಕುಮಾರ್ ನಿರ್ದೇಶನ ಇದೆ. ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಮೊದಲಾದವರು ನಟಿಸಿದ್ದಾರೆ. ಡಿಸೆಂಬರ್ 5ರಂದು ಸಿನಿಮಾ ರಿಲೀಸ್ ಆಗಲಿದೆ.


