ದೇಶ/ವಿದೇಶಸುದ್ದಿ

ಚುನಾವಣೆ ಬಾಂಡ್ ಹೆಸರಲ್ಲಿ ಸುಲಿಗೆ ಆರೋಪ.. ತೀರ್ಪು ಕಾಯ್ದಿರಿಸಿದ ಉಚ್ಚ ನ್ಯಾಯಾಲಯ

ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್​,  ನಳಿನ್ ಕುಮಾರ್ ಕಟೀಲು ಸೇರಿದಂತೆ ಮತ್ತಿತರರ ವಿರುದ್ಧ ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಆರೋಪ ಪ್ರಕರಣದ ತೀರ್ಪನ್ನು ಹೈಕೋರ್ಟ್​ ಏಕಸದಸ್ಯ ಪೀಠ ಕಾಯ್ದಿರಿಸಿದೆ. ದೂರುದಾರ ಆದರ್ಶ್ ಅಯ್ಯರ್ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಾಡಿದ್ದರೆ, ನಳಿನ್ ಕುಮಾರ್ ಕಟೀಲು ಪರ ಹಿರಿಯ ವಕೀಲ ಕೆ.ಜಿ.ರಾಘವನ್ ಪ್ರತಿವಾದ ಮಾಡಿದರು. ಈ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪು ಕಾಯ್ದಿರಿಸಿದೆ. ಇನ್ನು ಪ್ರಕರಣದ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ವಿಸ್ತರಿಸಿದೆ. ಇನ್ನು, ಇಡಿಯನ್ನು ಬಳಸಿಕೊಂಡು ಚುನಾವಣಾ ಬಾಂಡ್‌ಗೆ ಹಣ ಸಂಗ್ರಹಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ವಿರುದ್ಧ ಈ ಆರೋಪವಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ದೂರು ದಾಖಲಿಸಲಾಗಿದೆ. ಆಡಳಿತ ಪಕ್ಷ ಸಿಬಿಐ, ಇಡಿಯನ್ನು ಬಳಸಿ ಹಣ ಸುಲಿಗೆ ಮಾಡುತ್ತಿದೆ. ಪ್ರತಿ ನಾಗರಿಕನೂ ಇದರಿಂದ ನೊಂದಿರುವುದರಿಂದ ದೂರು ದಾಖಲಿಸಬಹುದೆಂದು ವಾದಿಸಿದರು. ಇದಕ್ಕೆ ನಳಿನ್ ಕುಮಾರ್ ಕಟೀಲು ಪರ ಹಿರಿಯ ವಕೀಲ ಕೆ.ಜಿ.ರಾಘವನ್ ಪ್ರತಿಯಾಗಿ ವಾದ ಮಾಡಿದ್ದು, ಸುಲಿಗೆಗೊಳಗಾದ ಸಂತ್ರಸ್ತರು ಯಾರೂ ದೂರು ನೀಡಿಲ್ಲ. ದೂರುದಾರರು ಸಂತ್ರಸ್ತರಲ್ಲದಿರುವುದರಿಂದ ದೂರು ದಾಖಲಿಸುವಂತಿಲ್ಲ. ಈ ಪ್ರಕರಣದಲ್ಲಿ ಸಂತ್ರಸ್ತರಲ್ಲದಿರುವುದರಿಂದ ದೂರು ದಾಖಲಿಸುವಂತಿಲ್ಲ. ಆರೋಪಿಗಳು ಹಣ ಸ್ವೀಕರಿಸಿದ್ದಾರೆಂಬುವುದಕ್ಕೂ ದೂರಿನಲ್ಲಿ ಯಾವುದೇ ಚಕಾರವಿಲ್ಲ. ಹೀಗಾಗಿ ಸುಲಿಗೆ ವ್ಯಾಖ್ಯಾನಕ್ಕೆ ದೂರು ಒಳಪಡುವುದಿಲ್ಲವೆಂದು ಕೋರ್ಟ್​ಗೆ ತಿಳಿಸಿದರು.ಎರಡೂ ಕಡೆಯಿಂದಲೂ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ತೀರ್ಪು ಕಾಯ್ದಿರಿಸಿದೆ. ಇನ್ನು ಪ್ರಕರಣದ ತನಿಖೆಗೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದೆ.

Comments (0)

Your email address will not be published. Required fields are marked *

Back to top button