ದೇಶ/ವಿದೇಶ

ಮನೆಯಿಂದ ಹೊರಗೆ ಬರಬೇಡಿ..!

ಪಾಕಿಸ್ತಾನ ಭಾರತದ ಮೇಲೆ ಭೀಕರ ವಾಯುದಾಳಿ ನಡೆಸುತ್ತಿದೆ. ಪಂಜಾಬ್, ಜಮ್ಮು ಕಾಶ್ಮೀರ, ರಾಜಸ್ಥಾನದ ಪ್ರದೇಶದ ಮೇಲೆ ಡ್ರೋಣ್ ಮೂಲಕ ಅಟ್ಯಾಕ್ ಮಾಡ್ತಿದೆ. ಗಡಿ ಪ್ರದೇಶದಲ್ಲಿ ಭಾರಿ ಕ್ಷಿಪಣಿ ದಾಳಿ ನಡೆಯುತ್ತಿದೆ.

ಈ ಕ್ಷಿಪಣಿ ದಾಳಿ ಹಿನ್ನೆಲೆ ಚಂಡೀಗಡದಲ್ಲಿ ಏರ್ ಸ್ಟ್ರೈಕ್ ಸೈರನ್ ಮೊಳಗಿದೆ. ವಾಯುಸೇನೆ ಸ್ಟೇಷನ್​​​ನಿಂದ ಸೈರನ್ ಮೊಳಗಿದೆ. ಜನರು ಹೊರಗಡೆ ಬರಬೇಡಿ, ಮನೆಯಲ್ಲೇ ಇರಿ ಅಂತ ಸೂಚನೆ ನೀಡಲಾಗಿದೆ. ಮನೆಯ ಬಾಲ್ಕನಿಗೂ ಬರಬೇಡಿ ಎಂದು ಸೂಚನೆ ನೀಡಲಾಗಿದೆ.. ಚಂಡೀಗಡದ ನಿವಾಸಿಗಳು ಮನೆ ಬಿಟ್ಟು ಹೊರಗೆ ಬರದಂತೆ ಸೂಚನೆ ಕೊಟ್ಟಿದೆ.

ಇದರ ಜೊತೆಗೆ ಹರಿಯಾಣದ ಪಂಚಕುಲದಲ್ಲೂ ವೈಮಾನಿಕ ದಾಳಿ ಮುನ್ನೆಚ್ಚರಿಕೆ ನೀಡಲಾಗಿದೆ. ಪಂಚಕುಲದಲ್ಲಿ 2 ಕಡೆ ಏರ್ ಸ್ಟ್ರೈಕ್ ಸೈರನ್ ಮೊಳಗಿದ್ದು, ಮನೆಯಿಂದ ಜನರು ಹೊರಗೆ ಬರದಂತೆ ಸೂಚನೆ ನೀಡಲಾಗಿದೆ.

Comments (0)

Your email address will not be published. Required fields are marked *

Back to top button