ರಾಜಕೀಯ

ಉಚ್ಚಾಟನೆ ಬಳಿಕ ತವರಿನಲ್ಲಿ ಯತ್ನಾಳ್ ಪೂಜೆ, ಹೋಮ

ವಿಜಯಪುರ: ಯುಗಾದಿ ಹಬ್ಬದ ಪ್ರಯುಕ್ತ ಬಿಜೆಪಿಯಿಂದ ಉಚ್ಚಾಟನೆಯಾದ ಮೇಲೆ ಮೊದಲ ಬಾರಿಗೆ ವಿಜಯಪುರಕ್ಕೆ ಶಾಸಕ ಯತ್ನಾಳ್ ಆಗಮಿಸಿದ್ದಾರೆ.

ಬೆಂಗಳೂರಿನಿಂ‌ದ ತಡರಾತ್ರಿ ಪ್ರಯಾಣ ಬೆಳೆಸಿ ವಿಜಯಪುರಕ್ಕೆ ಆಗಮಿಸಿದ್ದಾರೆ. ವಿಜಯಪುರದ ಪ್ರಸಿದ್ಧ ಸಿದ್ದೇಶ್ವರ ದೇವಸ್ಥಾನದಲ್ಲಿ ಯತ್ನಾಳ್ ಹಾಗೂ ಕುಟುಂಬ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಪತ್ನಿ ಶೈಲಜಾ ಹಾಗೂ ಸಿದ್ದೇಶ್ವರ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಭಾಗಿಯಾಗಿದ್ದಾರೆ.

ಪೂಜೆ ಬಳಿಕ ಮಂಗಳಾರತಿ ಕಾರ್ಯಕ್ರಮ ಮುಗಿಸಿದ್ದಾರೆ. ನಂತರ ಇದೀಗ ಪ್ರತಿ ವರ್ಷ ಯುಗಾದಿ ಪಾಡ್ಯಾದಂದು ನಡೆಸುವ ಹೋಮ ಹವನ ಪೂಜೆ ಕಾರ್ಯಗಳಲ್ಲಿ ಭಾಗಿ ಆಗಿದ್ದಾರೆ.

ಹೋಮ ಮುಗಿದ ನಂತರ ಸಿದ್ದೇಶ್ವರ ಸಂಸ್ಥೆಯಿಂದ ನಿರ್ಮಿಸಿರೋ ದಾಸೋಹ ನಿಲಯ ಹಾಗೂ ಕಟ್ಟಡ ಉದ್ಘಾಟನೆ ಪೂಜಾ ಕಾರ್ಯದಲ್ಲಿ ಯತ್ನಾಳ್ ಭಾಗಿಯಾಗಲಿದ್ದಾರೆ.

Comments (0)

Your email address will not be published. Required fields are marked *

Back to top button