Tuesday, January 27, 2026
26.7 C
Bengaluru
Google search engine
LIVE
ಮನೆಸಿನಿಮಾಸ್ವಂತ ಗಂಡನನ್ನು ಬಿಟ್ಟು ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ್

ಸ್ವಂತ ಗಂಡನನ್ನು ಬಿಟ್ಟು ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ರಾಜಾರಾಣಿ’ ರಿಯಾಲಿಟಿ ಶೋ ಈಗಾಗಲೇ ಎರಡು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದೀಗ ‘ರಾಜ ರಾಣಿ’ ಸೀಸನ್ ಮೂರರಲ್ಲಿ ನಟಿ ಅದಿತಿ ಪ್ರಭುದೇವ  ಕಾಣಿಸಿಕೊಳ್ಳುತ್ತಿದ್ದಾರೆ. ರಾಜರಾಣಿ ಸೀಸನ್ 1’ರಲ್ಲಿ ನಟಿ ನೇಹಾ ಗೌಡ ಹಾಗೂ ಅವರ ಪತಿ ಚಂದನ್ ವಿನ್ನರ್ಸ್ ಆಗಿದ್ದರು. ಅಂತೆಯೇ ಸೀಸನ್ 2 ನಲ್ಲಿ ನಟಿ ಕಾವ್ಯಾ ಮಹದೇವ್ ಹಾಗೂ ಕುಮಾರ್ ದಂಪತಿ ಗೆದ್ದಿದ್ದರು.

ಇದರ ಬೆನ್ನಲ್ಲೇ ಇದೀಗ ‘ರಾಜ ರಾಣಿ ರೀಲೋಡೆಡ್’ ಎಂಬ ಶೀರ್ಷಿಕೆ ಅಡಿ ಸೀಸನ್‌ 3 ಬರುತ್ತಿದೆ.ವಿಶಿಷ್ಟ ಜೋಡಿಗಳ ಸಮಾಗಮದ ರಾಜ ರಾಣಿ ಶೋನಲ್ಲಿ ಅದಿತಿ ಪ್ರಭುದೇವ ಜಡ್ಜ್ ಆಗಿ ಎಂಟ್ರಿ ಕೊಡ್ತಿದ್ದಾರೆ. ಸೃಜನ್ ಲೋಕೇಶ್, ಹಿರಿಯ ನಟಿ ತಾರಾ ಜೊತೆ ಅದಿತಿ ಕೂಡ ಜಡ್ಜ್ ಆಗಿ ಸಾಥ್ ನೀಡುತ್ತಿದ್ದಾರೆ.ಸದ್ಯ ರಿಲೀಸ್ ಆಗಿರುವ ‘ರಾಜ ರಾಣಿ’ ಶೋನ ಪ್ರೋಮೋದಲ್ಲಿ ಅದಿತಿ ಸ್ಟೈಲೀಶ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ರೆಡ್ ಕಲರ್ ಗೌನ್‌ನಲ್ಲಿ ಮಿಂಚಿದ್ದಾರೆ. ಬಹುದಿನಗಳ ನಂತರ ನೆಚ್ಚಿನ ನಟಿಯನ್ನು ನೋಡಿ ಅಭಿಮಾನಿಗಳು ಖುಷಿಪಡ್ತಿದ್ದಾರೆ.

ಇದರ ಬೆನ್ನಲ್ಲೇ ಇದೀಗ ‘ರಾಜ ರಾಣಿ ರೀಲೋಡೆಡ್’ ಎಂಬ ಶೀರ್ಷಿಕೆ, ಹಾಗೂ ಪ್ರೋಮೋದಲ್ಲೂ ಏನೋ ವಿಶೇಷತೆ ಇದೆ ಎಂದೆಲ್ಲಾ ಹೇಳಿರುವ ಈ ತಂಡ ಯಾವ ರೀತಿ ಈ ಹೊಸ ಸೀಸನ್ ಅನ್ನು ತೆರೆ ಮೇಲೆ ತರಲಿದೆ ಎಂಬುದರ ಬಗ್ಗೆ ಬಹಳಷ್ಟು ಜನರಿಗೆ ಈಗಾಗಲೇ ಕುತೂಹಲವಿದೆ. ಅದೇನೇ ಇರಲಿ ನಟಿ ಅದಿತಿ ಪ್ರಭುದೇವ ಈ ಮೂಲಕ ಕಿರುತೆರೆಗೆ ವಾಪಸ್ ಆಗುತ್ತಿರುವುದಂತೂ ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ಬಹಳಷ್ಟು ಸಂತಸ ತಂದಿದೆ.

ನಟಿ ಅದಿತಿ ಪ್ರಭುದೇವ ನಾಗಕನ್ನಿಕೆ ಧಾರಾವಾಹಿಯಿಂದ ನಟನೆಯಲ್ಲಿ ಹೆಚ್ಚು ಹೆಸರು ಮಾಡಿದರು ನಂತರ ಸಿಂಗಂ, ಓಲ್ಡ್ ಮಾಂಕ್, ರಂಗನಾಯಕಿ, ತೋತಾಪುರಿ, ಲವ್ ಯು ಅಭಿ, ಸೇರಿದಂತೆ ಹಲವಾರು ಸಿನಿಮಾಗಳ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಯಶಸ್ ಪಟ್ಲ ಎಂಬುವವರನ್ನು ಮದುವೆಯಾದ ಇವರು ನಂತರ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ದೈನಂದಿನ ವಿಚಾರಗಳೊಂದಿಗೆ, ಗಿಡಗಳ ಬಗ್ಗೆ, ಅಡುಗೆ ಕುರಿತು ಜೊತೆಗೆ ಪೌಷ್ಟಿಕ ಆಹಾರ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ವಿಚಾರಗಳ ಕುರಿತು ವಿಡಿಯೋ ಹಾಗೂ ರೀಲ್ಸ್ ಮಾಡಿ ಜನರಿಗೆ ಹತ್ತಿರವಾಗಿದ್ದಾರೆ. ಇತ್ತೀಚೆಗೆ ಅವರ ಸೀಮಂತದ ಸಮಯದಲ್ಲಿನ ಒಂದು ವಿಡಿಯೋ ಬಹಳ ವೈರಲ್ ಆಗಿತ್ತು.

ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಪ್ರಭುದೇವ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ಮೀಸಲಿಟ್ಟಿದ್ದರು. ಇದೀಗ ಮತ್ತೆ ವೃತ್ತಿ ಜೀವನ ನಡೆಗೆ ಹೆಚ್ಚು ಫೋಕಸ್ ಮಾಡಿರುವ ಇವರು ‘ರಾಜ ರಾಣಿ ರೀಲೋಡ್’ ಸೀಸನ್ ಮೂಲಕ ಕಿರುತೆರೆ ಗೆ ವಾಪಸ್ ಆಗುತ್ತಿದ್ದಾರೆ. ಇನ್ನೇನು ಸದ್ಯದಲ್ಲೇ ಈ ಹೊಸ ಸೀಸನ್ ಶುರುವಾಗಲಿದ್ದು ಅದಿತಿ ಪ್ರಭುದೇವ ಅವರು ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈಗ ಕುತೂಹಲ ಅಭಿಮಾನಿಗಳ ಕಾಡಿದೆ.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments